Advertisement
2019-20ನೇ ಸಾಲಿನಲ್ಲಿ ವಿತರಣೆಯಾಗಿದ ಪ್ರೌಢಶಾಲಾ ಪಠ್ಯಪುಸ್ತಕಗಳಲ್ಲಿ ಮೊಬೈಲ್ ಮೂಲಕ ಹೆಚ್ಚುವರಿ ಅಧ್ಯಯನ ವನ್ನು ಸಾಧ್ಯವಾಗಿಸುವ ಈ ತಂತ್ರಜ್ಞಾನ ಅಳವಡಿಸಲಾಗಿದೆ. ಇದನ್ನು ದೀಕ್ಷಾ ಅಪ್ಲಿಕೇಶನ್ ಮೂಲಕ ಸ್ಕ್ಯಾನ್ ಮಾಡಿದರೆ ಪಠ್ಯಕ್ಕೆ ಪೂರಕ ಮಾಹಿತಿ, ಚಿತ್ರ, ಇತರ ಚಟುವಟಿಕೆಗಳನ್ನು ನೋಡಲು ಸಾಧ್ಯವಾಗುತ್ತದೆ. ಇದರಿಂದ ಪಠ್ಯಕ್ಕಿಂತಲೂ ಅಧಿಕ ಮಾಹಿತಿ ಪಡೆದುಕೊಳ್ಳಲು ಅನುವಾಗುತ್ತದೆ.
ಈ ಶೈಕ್ಷಣಿಕ ಸಾಲಿನ ಪ್ರೌಢಶಾಲೆ ಪಠ್ಯಪುಸ್ತಕದ ಪ್ರತೀ ಪಾಠದ ಒಂದು ಬದಿಯಲ್ಲಿ ಈ ಕ್ಯೂಆರ್ ಕೋಡ್ ನೀಡಲಾಗಿದೆ. ಪಠ್ಯ ದಲ್ಲಿರುವ ವಿಷಯದ ಬಗ್ಗೆ ಇನ್ನಷ್ಟು ವಿಸ್ತೃತ ಮಾಹಿತಿ ಇದರ ಮೂಲಕ ಲಭ್ಯವಾಗುತ್ತದೆ. ಕ್ಯೂ ಆರ್ ಕೋಡ್‌ಗಳ ಬಳಕೆ, ಪ್ರಯೋಜನದ ಬಗ್ಗೆ ಮೊದಲ ಹಂತದಲ್ಲಿ ಶಾಲಾ ಶಿಕ್ಷಕರಿಗೆ, ಎರಡನೇ ಹಂತದಲ್ಲಿ ಮಕ್ಕಳಿಗೆ ತರಬೇತಿ ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಕೇಂದ್ರ ಸರಕಾರ ವಿದ್ಯಾರ್ಥಿ ಗಳಿಗೆಂದು ರೂಪಿಸಿದ ಅಪ್ಲಿಕೇಶನ್ ದೀಕ್ಷಾ. ಇದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ಕೊಳ್ಳಬಹುದು. ಪ್ರೌಢಶಾಲೆಯ 8, 9 ಮತ್ತು 10 ನೇ ತರಗತಿಗಳಿಗೆ ಸಂಬಂಧಿಸಿದ ಪಠ್ಯ ಮಾಹಿತಿ ಇದರಲ್ಲಿದ್ದು, ದೇಶದ 24 ರಾಜ್ಯಗಳ ಪಠ್ಯಕ್ರಮಕ್ಕೆ ಅನುಗುಣವಾಗಿ ಮಾಹಿತಿ ಅಡಕವಾಗಿದೆ. ಅಪ್ಲಿಕೇಶನ್ ಹೊಂದಿರುವ ಯಾವುದೇ ವ್ಯಕ್ತಿ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮೂಲಕ ಲಾಗಿನ್ ಆಗಿ ಬೇಕಾದ ರಾಜ್ಯದ ಪಠ್ಯವನ್ನು ಪಡೆಯಲು ಅವಕಾಶವಿದೆ.
Related Articles
Advertisement
ಅಳವಡಿಕೆ ಹೇಗೆ?ಗೂಗಲ್ ಪ್ಲೇಸ್ಟೋರ್‌ನಲ್ಲಿ ದೀಕ್ಷಾ ಅಪ್ಲಿಕೇಶನ್ ಎಂದು ಟೈಪ್ ಮಾಡಿ, ಡೌನ್‌ಲೋಡ್ ಮಾಡಿಕೊಂಡು ಇಮೇಲ್, ಮೊಬೈಲ್ ಸಂಖ್ಯೆ ಸಹಿತ ಅಗತ್ಯ ದಾಖಲೆ ನಮೂದಿಸಬೇಕು. ಅನಂತರ ಮೊಬೈಲ್ ನಂಬರ್‌ಗೆ ಒಟಿಪಿ ಸಂದೇಶ ಬರುತ್ತದೆ. ಆ ಸಂಖ್ಯೆಯನ್ನು ಅಪ್ಲಿಕೇಶನ್‌ನ ನಿರ್ದಿಷ್ಟ ಸ್ಥಳದಲ್ಲಿ ತುಂಬಿದರೆ ಅಪ್ಲಿಕೇಶನ್ ಇನ್‌ಸ್ಟಾಲ್ ಆಗುತ್ತದೆ. ಹೆಚ್ಚಿನ ಮಾಹಿತಿ ಸಿಗುತ್ತದೆ
ಕ್ಯೂಆರ್ ಕೋಡ್ ಅನ್ನು ದೀಕ್ಷಾ ಅಪ್ಲಿಕೇಶನ್ ಮೂಲಕ ಸ್ಕ್ಯಾನ್ ಮಾಡಿದಲ್ಲಿ ಪಠ್ಯಕ್ಕೆ ಸಂಬಂಧಿಸಿದ ಹೆಚ್ಚಿನ ವಿಷಯಗಳನ್ನು ತಿಳಿಯಲು ಸಾಧ್ಯವಿದೆ. ಹೈಸ್ಕೂಲು ಪಠ್ಯಪುಸ್ತಕಗಳಲ್ಲಿ ಇದನ್ನು ಒದಗಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಯೋಜನ ದೊರೆಯಲಿದೆ.
– ವೈ. ಶಿವರಾಮಯ್ಯ ಡಿಡಿಪಿಐ, ಮಂಗಳೂರು ಕಿರಣ್ ಪ್ರಸಾದ್ ಕುಂಡಡ್ಕ