Advertisement

ಮೀನುಗಾರರಿಗೆ ಕ್ಯುಆರ್‌ ಕೋಡ್‌ ಆಧಾರ್‌ ಕಾರ್ಡ್‌: ಸಚಿವ ಕೋಟ

01:15 AM Jul 01, 2020 | Hari Prasad |

ಮಂಗಳೂರು: ಸುರಕ್ಷೆ ದೃಷ್ಟಿಯಿಂದ ಮೀನುಗಾರರಿಗೆ ಕ್ಯುಆರ್‌ ಕೋಡ್‌ ಆಧಾರಿತ ಆಧಾರ್‌ ಕಾರ್ಡ್‌ಗಳನ್ನು ಕಡ್ಡಾಯಗೊಳಿಸಲು ನಿರ್ಣಯಿಸಲಾಗಿದೆ ಎಂದು ಬಂದರು, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Advertisement

ಮಂಗಳವಾರ ಜಿ.ಪಂ. ಸಭಾಂಗಣ ದಲ್ಲಿ ಜರಗಿದ ಕರಾವಳಿ ಮೀನುಗಾರಿಕೆ ಕುರಿತ ಸಂವಾದದಲ್ಲಿ ಮಾತನಾಡಿದ ಅವರು ಕ್ಯು ಆರ್‌ ಕೋಡ್‌ ರಹಿತ ಆಧಾರ್‌ ಕಾರ್ಡ್‌ ಹೊಂದಿರುವ ಮೀನುಗಾರರಿಗೆ ಹೊಸತಾಗಿ ಕ್ಯು ಆರ್‌ ಕೋಡ್‌ ಇರುವ ಆಧಾರ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಇಲಾಖೆ ಹಾಗೂ ಫೆಡರೇಶನ್‌ ಮೂಲಕ ಜಿಲ್ಲಾಮಟ್ಟದಲ್ಲಿ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು.

ಸ್ವಯಂಚಾಲಿತ ಮಾಹಿತಿ ವ್ಯವಸ್ಥೆ
ಮೀನುಗಾರಿಕಾ ದೋಣಿಗಳಲ್ಲಿ ಸ್ವಯಂಚಾಲಿತ ಮಾಹಿತಿ ವ್ಯವಸ್ಥೆ ಅಳವಡಿಸಿ ಪರವಾನಿಗೆ ಪಡೆದು ಅದನ್ನು ನಿಗದಿತ ಅವಧಿಗೆ ನವೀಕರಣಗೊಳಿಸಬೇಕೆಂದು ಕರಾವಳಿ ಕಾವಲು ಪಡೆಯ ಅಧೀಕ್ಷಕ ಚೇತನ್‌ ಹೇಳಿದರು.

ಕಾವಲುಪಡೆಗೆ ಮೀನುಗಾರರು
ಮೀನುಗಾರರ ಮನವಿಗೆ ಪ್ರತಿ ಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಕರಾವಳಿ ಕಾವಲು ಪಡೆಗೆ ಶೇ. 20ರಷ್ಟು ಮಂದಿ ಮೀನುಗಾರರನ್ನೇ ಆಯ್ಕೆ ಮಾಡುವಂತೆ ನಿರ್ಣಯ ಕೈಗೊಂಡು ಈ ಬಗ್ಗೆ ಸಿಎಂ ಜತೆ ಚರ್ಚಿಸ ಲಾಗುವುದು’ ಎಂದು ತಿಳಿಸಿದರು.

‘ಕೃಷಿ ಮಾರ್ಗಸೂಚಿ ಅನ್ವಯಿಸಿ’
ಮೀನುಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ಅವರು, ‘ಕೃಷಿಗೆ ಇರುವ ಮಾರ್ಗಸೂಚಿಗಳು ಮೀನುಗಾರರಿಗೂ ಅನ್ವಯವಾಗಬೇಕು, ಮೀನುಗಾರರಿಗೆ ಒದಗಿಸಲಾಗುವ ಸಬ್ಸಿಡಿಯನ್ನು ನಿಗದಿತ ಅವಧಿಯಲ್ಲಿ ಬಿಡುಗಡೆಗೊಳಿಸಬೇಕು, ಮೀನುಗಾರಿಕೆ ಬೋಟ್‌ಗಳ ಇಂಜಿನ್‌ಗಳು ಚೀನದಲ್ಲಿ ತಯಾರಾಗುತ್ತಿದ್ದು ಬಿಡಿ ಭಾಗಗಳಿಗೂ ಚೀನವನ್ನು ಅವಲಂಬಿಸಬೇಕಾಗಿದೆ. ಹಾಗಾಗಿ ಎಂಜಿನ್‌, ಬಿಡಿ ಭಾಗಗಳ ಘಟಕವೊಂದನ್ನು ಭಾರತ ದಲ್ಲಿಯೇ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

Advertisement

ಕುಳಾಯಿ ಜೆಟ್ಟಿ ನಿಗದಿತ ಅವಧಿಗೆ ಪೂರ್ಣ
ಸಂವಾದವನ್ನು ಉದ್ಘಾಟಿಸಿದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಮಾತನಾಡಿ, ಮೀನುಗಾರಿಕಾ ಜೆಟ್ಟಿಯನ್ನು ಈಗಾಗಲೇ ನಿಗದಿಯಾ ಗಿರುವಂತೆ ಕುಳಾಯಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next