Advertisement

ಕತಾರ್‌ ಓಪನ್‌ ಟೆನಿಸ್‌: ಬೋಪಣ್ಣ ಜೋಡಿಗೆ ಪ್ರಶಸ್ತಿ

10:04 AM Jan 12, 2020 | Sriram |

ದೋಹಾ: ಭಾರತದ ರೋಹನ್‌ ಬೋಪಣ್ಣ ವರ್ಷಾರಂಭದಲ್ಲೇ ಟೆನಿಸ್‌ ಸಡಗರ ತಂದಿತ್ತಿದ್ದಾರೆ. ನೆದರ್ಲೆಂಡ್ಸ್‌ನ ವೆಸ್ಲಿ ಕೂಲೋಫ್ ಜತೆಗೂಡಿ ಕತಾರ್‌ ಓಪನ್‌ ಪುರುಷರ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದಾರೆ.

Advertisement

ಶುಕ್ರವಾರ ರಾತ್ರಿ ನಡೆದ ಫೈನಲ್‌ನಲ್ಲಿ 3ನೇ ಶ್ರೇಯಾಂಕದ ಬೋಪಣ್ಣ-ಕೂಲೋಫ್ ಜತೆಗೂಡಿ ಲ್ಯೂಕ್‌ ಬಾಂಬ್ರಿಜ್‌ (ಬ್ರಿಟನ್‌)-ಸ್ಯಾಂಟಿಯಾಗೊ ಗೊಂಜಾಲೆಜ್‌ (ಮೆಕ್ಸಿಕೊ) ವಿರುದ್ಧ 3-6, 6-3, 10-6 ಅಂತರದ ಜಯ ಸಾಧಿಸಿದರು.

“ನಾನು ಕೂಲೋಫ್ ಜತೆಯಾಗಿ ಸ್ಪರ್ಧಿಸುತ್ತಿರುವುದು ಇದೇ ಮೊದಲು. ಮೊದಲ ಪ್ರಯತ್ನದಲ್ಲೇ ನಮಗೆ ಗೆಲುವು ಒಲಿದದ್ದು ಅತ್ಯಂತ ಖುಷಿಯ ಸಂಗತಿ’ ಎಂಬುದಾಗಿ ರೋಹನ್‌ ಬೋಪಣ್ಣ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next