Advertisement

ಕತಾರ್‌ ಓಪನ್‌ ಒಸಾಕಾ ಸ್ಪರ್ಧೆ ಇಲ್ಲ

12:30 AM Feb 07, 2019 | Team Udayavani |

ಟೋಕಿಯೊ:  ಮುಂದಿನ ವಾರ ಆರಂಭವಾಗಲಿರುವ “ಕತಾರ್‌ ಓಪನ್‌’ ಟೂರ್ನಿಯಿಂದ ವಿಶ್ವದ ನಂ. 1 ಆಟಗಾರ್ತಿ ಜಪಾನಿನ ನವೋಮಿ ಒಸಾಕಾ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

Advertisement

ಬೆನ್ನು ನೋವಿನಿಂದ ಬಳಲುತ್ತಿರುವ ಒಸಾಕಾ ಆಸ್ಟ್ರೇಲಿಯನ್‌ ಓಪನ್‌ ಕೂಟದ ಬಳಿಕ ಇದೇ ಮೊದಲ ಬಾರಿಗೆ ಟೆನಿಸ್‌ ಕೋರ್ಟ್‌ಗೆ ಇಳಿಯಲಿದ್ದರು.

“ಈ ಕೂಟದಿಂದ ನಾನು ಹಿಂದೆ ಸರಿಯುತ್ತಿರುವುದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ. ದೋಹಾದಲ್ಲಿ ಆಡಬೇಕು, ಅಭಿಮಾನಿಗಳನ್ನು ಕಾಣಲು ಕಾತುರಳಾಗಿದ್ದೆ. ಆದರೆ ಬೆನ್ನು ನೋವು ಕಾಟ ಕೊಡುತ್ತಿದೆ. ಹೀಗಾಗಿ ಕತಾರ್‌ ಓಪನ್‌ನಿಂದ ಹೊರಗುಳಿಯಲಿದ್ದೇನೆ’ ಎಂದು ಒಸಾಕಾ ಹೇಳಿದ್ದಾರೆ.

ಫೆ. 11ರಿಂದ ಆರಂಭವಾಗಿರುವ ಕತಾರ್‌ ಓಪನ್‌ನಲ್ಲಿ ಒಸಾಕಾ ಬದಲು ರೊಮೇನಿಯಾದ ಸಿಮೋನಾ ಹಾಲೆಪ್‌ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next