Advertisement

ಭಾರತದ ಸೀಫುಡ್ ಮೇಲಿನ ನಿರ್ಬಂಧ ತೆರವು

09:52 PM Feb 18, 2023 | Team Udayavani |

ನವದೆಹಲಿ: ಭಾರತದಿಂದ ಶೀತಲೀಕರಿಸಿದ (ಪ್ರೋಜನ್‌) ಮೀನುಗಳ ಆಮದಿಗೆ ಹೇರಲಾಗಿದ್ದ ತಾತ್ಕಾಲಿಕ ನಿರ್ಬಂಧವನ್ನು ಕತಾರ್‌ ಶನಿವಾರ ವಾಪಸ್‌ ಪಡೆದಿದೆ. ಹೀಗಾಗಿ, ಸೀಫುಡ್ ರಫ್ತು ಪ್ರಮಾಣ ಹೆಚ್ಚಲಿದ್ದು, ಪಶ್ಚಿಮ ಏಷ್ಯಾ ದೇಶದೊಂದಿಗಿನ ದ್ವಿಪಕ್ಷೀಯ ಸಂಬಂಧವೂ ಸುಧಾರಿಸಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.

Advertisement

ಭಾರತದಿಂದ ಹೋಗಿದ್ದ ಸೀಫುಡ್ ನ‌ಲ್ಲಿ ವಿಬಿಯೋ ಕಾಲರಾ ಎಂಬ ಸೋಂಕು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷದ ನವೆಂಬರ್‌ನಲ್ಲಿ ಅಂದರೆ ಫಿಫಾ ವಿಶ್ವಕಪ್‌  ಮುಂಚೆ, ಸೀಫುಡ್ ಆಮದು ಮೇಲೆ ಕತಾರ್‌ ನಿಷೇಧ ಹೇರಿತ್ತು. ಅಂದಿನಿಂದಲೂ ಕೇಂದ್ರ ವಾಣಿಜ್ಯ ಸಚಿವಾಲಯವು ಕತಾರ್‌ನ ರಾಯಭಾರ ಕಚೇರಿಯೊಂದಿಗೆ ನಿರಂತರ ಮಾತುಕತೆ ನಡೆಸಿದ್ದು, ನಿಷೇಧ ವಾಪಸ್‌ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಲೇ ಇತ್ತು. ಇದರ ಪರಿಣಾಮವೆಂಬಂತೆ, ಈಗ ಭಾರತದಿಂದ ಆಮದಾಗುವ ಮೀನುಗಳ ಮೇಲಿನ ನಿರ್ಬಂಧವನ್ನು ಕತಾರ್‌ ತೆಗೆದುಹಾಕಿದೆ. ಆದರೆ, ಚಿಲ್ಡ್‌ ಸೀಫುಡ್ ರಫ್ತು ಮೇಲಿನ ನಿರ್ಬಂಧ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next