Advertisement
ಒಟ್ಟು 194 ಕೆಜಿ ಭಾರವನ್ನೆತ್ತಿದ 25ರ ಹರೆಯದ ಮೀರಾಬಾಯಿ ಚಾನು ಬಂಗಾರಕ್ಕೆ ಕೊರಳೊಡ್ಡಿದರು. ಅವರು ಸ್ನ್ಯಾಚ್‌ನಲ್ಲಿ 83 ಕೆಜಿ, ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 111 ಕೆಜಿ ಭಾರತವೆತ್ತಿದರು. ಫ್ರಾನ್ಸ್‌ನ ಅನೈಸ್ ಮೈಕೆಲ್ ಬೆಳ್ಳಿ (172 ಕೆಜಿ) ಮತ್ತು ಮಾನನ್ ಲೊರೆಂಜ್ ಕಂಚು ಗೆದ್ದರು (165 ಕೆಜಿ).
ಮೀರಾಬಾಯಿ ಚಾನು ಅವರ ಶುಕ್ರವಾರದ ಸಾಧನೆ ಒಲಿಂಪಿಕ್ಸ್ ಅರ್ಹತಾ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಮೀಸಲಾದ ಸ್ಪರ್ಧೆಯಾಗಿತ್ತು.ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕಾದರೆ ವೇಟ್‌ಲಿಫ್ಟರ್‌ಗಳು 6 ತಿಂಗಳ ಅವಧಿಯಲ್ಲಿ ನಡೆಯುವ (ನ. 2018ರಿಂದ ಎ. 2020) ಒಟ್ಟು 6 ಕೂಟಗಳಲ್ಲಿ ಪಾಲ್ಗೊಳ್ಳಬೇಕು ಹಾಗೂ ಒಂದು ಚಿನ್ನ, ಒಂದು ಬೆಳ್ಳಿ ಪದಕ ಗೆಲ್ಲಬೇಕು.