Advertisement

ನಿರ್ಧಾರ ಮುಂದೂಡಿದ ಕತಾರ್‌ ಸಂಸ್ಥೆ 

08:40 AM Sep 05, 2018 | Karthik A |

ಹೊಸದಿಲ್ಲಿ: ಭಾರತದಲ್ಲಿ ತನ್ನದೇ ಆದ ಸ್ವತಂತ್ರ ವಿಮಾನಯಾನ ಸಂಸ್ಥೆ ಆರಂಭಿಸಲು ಉದ್ದೇಶಿಸಿರುವ ಕತಾರ್‌ ಏರ್‌ಲೈನ್ಸ್‌ ಸದ್ಯದ ಮಟ್ಟಿಗೆ ಈ ನಿರ್ಧಾರವನ್ನು ಒಂದು ವರ್ಷದವರೆಗೆ ಮುಂದೂಡಲು ತೀರ್ಮಾನಿಸಿದೆ.
 
ಭಾರತಕ್ಕೆ ಕಾಲಿಡಲು ಬಯಸುವ ವಿದೇಶಿ ಕಂಪನಿಗಳು ಭಾರತದ ಯಾವುದಾದರೊಂದು ಸಂಸ್ಥೆ ಅಥವಾ ನಾಗರಿಕರೊಂದಿಗೆ ಸಹಭಾಗಿತ್ವದಲ್ಲಿ ಸಂಸ್ಥೆ ತೆರೆಯಲು ಮಾತ್ರ ಅವಕಾಶವಿದೆ. ಅಲ್ಲದೆ, ಭಾರತದಲ್ಲಿ ಅಸ್ತಿತ್ವಕ್ಕೆ ಬರುವ ವಿದೇಶಿ ಕಂಪನಿಯಲ್ಲಿ ಆ ಕಂಪನಿಯ ಷೇರು ಶೇ.50ಕ್ಕಿಂತ ಹೆಚ್ಚಿರಬಾರದು ಎಂಬ ನಿಯಮವೂ ಇದೆ. ಆದರೆ, ಕತಾರ್‌ ಸಂಸ್ಥೆ ಏಕಮೇವ ಮಾಲೀಕತ್ವದ ಸಂಸ್ಥೆ ತೆರೆಯಲು ಉತ್ಸುಕವಾಗಿರುವುದರಿಂದ ಭಾರತದ ನಿಯಮಗಳು ಇದಕ್ಕೆ ಅಡ್ಡಿಯಾಗಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next