Advertisement
ಆರ್ಥಿಕತೆ ಕುಸಿತದ ಹಾದಿಯಲ್ಲಿದ್ದರಿಂದ ಭಾರತದ ಜಿಡಿಪಿ ದರ ಇಳಿಕೆಯಾದ್ದರಿಂದ ಚೀನ ಮೊದಲ ಸ್ಥಾನಕ್ಕೆ ಹೋಗಿತ್ತು. ಸದ್ಯ ನೆರೆಯ ಅಭಿವೃದ್ಧಿ ದರ ಶೇ. 6.8ರಷ್ಟಿದೆ. ಬುಧವಾರ ಡಿ.ವಿ. ಸದಾನಂದ ಗೌಡ ನೇತೃತ್ವದ ಕೇಂದ್ರೀಯ ಸಾಂಖೀಕ ಇಲಾಖೆ ವಾಸ್ತವ ದತ್ತಾಂಶ ಬಿಡುಗಡೆ ಮಾಡಿದೆ.
ಮೂಡೀಸ್‌ನ ಹೂಡಿಕೆದಾರರ ಸೇವೆಯೂ 2018ನೇ ಸಾಲಿನಲ್ಲಿ ಭಾರತದ ಜಿಡಿಪಿ ದರ ಶೇ.7.6ಕ್ಕೆ ಏರಿಕೆಯಾಗಲಿದೆ ಎಂದು ಹೇಳಿದೆ. ಅಲ್ಲದೆ 2019ಕ್ಕೆ ಈ ದರ ಶೇ.7.5ರಷ್ಟಕ್ಕೆ ನಿಲ್ಲಲಿದೆ ಎಂದೂ ನಿರೀಕ್ಷೆ ಮಾಡಿದೆ. ನೋಟು ಅಪಮೌಲ್ಯ , ಜಿಎಸ್‌ಟಿಯ ಹೊಡೆತದಿಂದ ಭಾರತದ ಆರ್ಥಿಕತೆ ಹೊರ ಬಂದಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದೂ ಅಭಿಪ್ರಾಯಿಸಲಾಗಿದೆ. ಜಿಡಿಪಿ ಜಿಗಿತ ಶೇ. 7.2 ಡಿಸೆಂಬರ್ ಅಂತ್ಯದವರೆಗಿನ ತ್ತೈಮಾಸಿಕದ ಜಿಡಿಪಿ
ಶೇ. 6.5 ಈ ಹಿಂದೆ ಮಾಡಲಾಗಿದ್ದ ನಿರೀಕ್ಷೆ
ಶೇ. 7 ಅ-ಮಾರ್ಚ್ ಅವಧಿಯ ಸರಾಸರಿ ಅಭಿವೃದ್ಧಿ ದರ ನಿರೀಕ್ಷೆ
ಶೇ. 8.1ಕಳೆದ ತ್ತೈಮಾಸಿಕದಲ್ಲಿ ಉತ್ಪಾದನಾ ವಲಯದಲ್ಲಿ ಕಂಡ ಅಭಿವೃದ್ಧಿ