Advertisement

ರಾಮನಗರ: 12 ಅಡಿ ಉದ್ದದ ಹೆಬ್ಬಾವು ಪತ್ತೆ

09:26 PM Aug 25, 2019 | mahesh |

ರಾಮನಗರ: ತಾಲೂಕಿ ಬಿಡದಿ ಪುರಸಭೆ ವ್ಯಾಪ್ತಿಯ 6ನೇ ವಾರ್ಡು ಅವರಗೆರೆಯಲ್ಲಿ 12 ಅಡಿ ಉದ್ದದ ಹೆಬ್ಬಾವು ಶನಿವಾರ ರಾತ್ರಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಹೆಬ್ಬಾವನ್ನು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

Advertisement

ಶನಿವಾರ ರಾತ್ರಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಿಂತಿದ್ದ ಬೈಕ್ ಮೇಲೆ ಹೆಬ್ಬಾವು ಹರಿದಾಡಿದ್ದನ್ನು ಕಂಡ ನಾಗರೀಕರು ಹೌಹಾರಿದರು. ಬಿಡದಿ ಪೊಲೀಸರಿಗೆ ಮಾಹಿತಿ ಕೊಟ್ಟರು.

ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ಗಮನ ಸೆಳೆದರು. ಅರಣ್ಯ ಇಲಾಖೆಯ ಸಿಬ್ಬಂದಿ ಮಧ್ಯರಾತ್ರಿಯ ವೇಳೆಗೆ ಹೆಬ್ಬಾವನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next