Advertisement

ಹನೂರು: ಚಿಕನ್ ಅಂಗಡಿಯಲ್ಲಿ ಕಾಣಿಸಿಕೊಂಡ ಬೃಹತ್‌ ಹೆಬ್ಬಾವು

05:05 PM Jun 25, 2023 | Team Udayavani |

ಹನೂರು: ಚಿಕನ್ ಅಂಗಡಿಯೊಂದರಲ್ಲಿ ಹೆಬ್ಬಾವು ಕಾಣಿಸಿಕೊಂಡ ಘಟನೆ ತಾಲೂಕಿನ ಗಡಿಯಂಚಿನ ಹೂಗ್ಯಂ ಗ್ರಾಮದಲ್ಲಿ ನಡೆದಿದೆ.

Advertisement

ತಾಲೂಕಿನ ಹೂಗ್ಯಂ ಗ್ರಾಮದ ಭಾಗ್ಯಮ್ಮ ಎಂಬುವವರಿಗೆ ಸೇರಿದ ಚಿಕನ್ ಅಂಗಡಿಗೆ ಭಾನುವಾರ ಬೆಳ್ಳಂ ಬೆಳಗ್ಗೆಯೇ ಹೆಬ್ಬಾವು ಬಂದು ಸೇರಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಉರಗತಜ್ಞ ಜಬಿ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಜಬಿ ಕಾರ್ಯಚರಣೆ ನಡೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಈ ಸಂಬಂಧ ಮಾತನಾಡಿದ ಉರಗತಜ್ಞ ಜಬಿ ಹಾವುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ಯಾವುದೇ ರೀತಿಯ ಹಾವುಗಳು ಕಂಡುಬಂದರು ಯಾರೂ ಕೂಡ ಅವುಗಳನ್ನು ಸಾಯಿಸುವ ಕೆಲಸಕ್ಕೆ ಮುಂದಾಗಬೇಡಿ. ಪರಿಸರ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಾವುಗಳೂ ಕೂಡ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿರು.

Advertisement

Udayavani is now on Telegram. Click here to join our channel and stay updated with the latest news.

Next