Advertisement

ಪಿಯಾಂಗ್‌ಚಾಂಗ್‌ ಚಳಿಗಾಲದ ಒಲಿಂಪಿಕ್ಸ್‌ಗೆ ಅದ್ದೂರಿ ಚಾಲನೆ

06:20 AM Feb 10, 2018 | |

ಪಿಯಾಂಗ್‌ಚಾಂಗ್‌ (ದಕ್ಷಿಣ ಕೊರಿಯ): ಪಿಯಾಂಗ್‌ಚಾಂಗ್‌ ಚಳಿಗಾಲದ ಒಲಿಂಪಿಕ್ಸ್‌ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಪಥಸಂಚಲನದಲ್ಲಿ ದಕ್ಷಿಣ ಕೊರಿಯ ಮತ್ತು ಉತ್ತರ ಕೊರಿಯದ ಆ್ಯತ್ಲೀಟ್‌ಗಳು ನೀಲಿ ಮತ್ತು ಬಿಳಿ ಬಣ್ಣದ ಕೊರಿಯದ ಏಕೀಕರಣ ಧ್ವಜದಡಿ ಸಾಗಿ ಏಕತೆ ಮೆರೆದರೆ ದಕ್ಷಿಣ ಕೊರಿಯದ ಅಧ್ಯಕ್ಷರು ಕಿಮ್‌ ಜಾಂಗ್‌ ಉನ್‌ ಅವರ ಸಹೋದರಿಗೆ ಹಸ್ತಲಾಘವ ನೀಡಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.


ಕ್ರೀಡಾಂಗಣದ ವಿಐಪಿ ಗ್ಯಾಲರಿಗೆ ಪ್ರವೇಶಿಸಿದಾಗ ಮತ್ತು ಕೊರಿಯದ ಆ್ಯತ್ಲೀಟ್‌ಗಳು ಜತೆಯಾಗಿ ಪಥಸಂಚಲನದಲ್ಲಿ ಆಗಮಿಸಿದಾಗ ಉತ್ತರ ಕೊರಿಯದ ಮುಖ್ಯಸ್ಥ ಕಿಮ್‌ ಜಾಂಗ್‌ ಉನ್‌ ಅವರ ಸಹೋದರಿ ಕಿಮ್‌ ಯೊ ಜಂಗ್‌ ಅವರಿಗೆ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್‌ ಜಾಯ್‌ ಹಸ್ತಲಾಘನ ನೀಡಿದರು.


ನಮ್ಮ ನಡುವೆ ಹಲವು ಭಿನ್ನಾಬಿಪ್ರಾಯಗಳಿದ್ದರೂ ನೀವೆಲ್ಲರೂ ಶಾಂತಿ ಮತ್ತು ಸೌಹಾರ್ದಯುತವಾಗಿ ಬದುಕಲು ಪ್ರೇರೇಪಿಸಿದ್ದೀರಿ ಎಂದು ಗೇಮ್ಸ್‌ ಆರಂಭಕ್ಕೆ ಮೊದಲು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಅಧ್ಯಕ್ಷ ಥಾಮಸ್‌ ಬಾಕ್‌ ಹೇಳಿದರು. ಚಳಿಗಾಲದ ಗೇಮ್ಸ್‌ ಅನ್ನು ಆತಿಥ್ಯ ರಾಷ್ಟ್ರದ ಅಧ್ಯಕ್ಷ ಮೂನ್‌ ಉದ್ಘಾಟಿಸಿದರು.



Advertisement
Advertisement

Udayavani is now on Telegram. Click here to join our channel and stay updated with the latest news.

Next