Advertisement

“ಪೈಲ್ವಾನ್‌’ಮೊದಲ ಲುಕ್‌ ಬಿಡುಗಡೆ!

10:40 AM Sep 01, 2017 | |

ಸುದೀಪ್‌ ಅಭಿನಯದ ಹೊಸ ಚಿತ್ರ “ಪೈಲ್ವಾನ್‌’ನ ಮೊದಲ ನೋಟವನ್ನು ಸುದೀಪ್‌ ಅವರ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್‌ 2) ಬಿಡುಗಡೆ ಮಾಡುವುದಾಗಿ ಆ ಚಿತ್ರದ ನಿರ್ದೇಶಕ ಎಸ್‌. ಕೃಷ್ಣ ಹೇಳಿಕೊಂಡಿದ್ದರು. ಅದರಂತೆ ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಚಿತ್ರದ ಮೊದಲ ಲುಕ್‌ ಬಿಡುಗಡೆಯಾಗಿದೆ.

Advertisement

“ಪೈಲ್ವಾನ್‌’ ಚಿತ್ರವನ್ನು ಚಿತ್ರವನ್ನು ಆರ್‌.ಆರ್‌.ಆರ್‌. ಮೋಷನ್‌ ಪಿಕ್ಚರ್ ಬ್ಯಾನರ್‌ನಡಿ ಸ್ವಪ್ನ ಕೃಷ್ಣ ಮತ್ತು ಕೃಷ್ಣ ನಿರ್ಮಿಸುತ್ತಿದ್ದಾರೆ. ಇನ್ನು ನಿರ್ದೇಶನ ಮಾಡುವ ಜೊತೆಗೆ ಕಥೆ ಹಾಗೂ ಚಿತ್ರಕಥೆಯನ್ನು ಕೃಷ್ಣ ರಚಿಸಿದ್ದಾರೆ. ಇದೊಂದು ಬಾಕ್ಸಿಂಗ್‌ ಮತ್ತು ಕುಸ್ತಿ ಕುರಿತಾದ ಚಿತ್ರವಾಗಿದ್ದು, ಅಕ್ಟೋಬರ್‌ ಕೊನೆಯಲ್ಲಿ ಚಿತ್ರ ಆರಂಭವಾಗಲಿದೆ.

ಈ ಚಿತ್ರಕ್ಕಾಗಿ ದಾವಣಗೆರೆ, ಹುಬ್ಬಳ್ಳಿ ಸುತ್ತಮುತ್ತ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆಯಂತೆ. ಈಗಾಗಲೇ ಬ್ಯಾಂಕಾಕ್‌ನಲ್ಲಿ ಚಿತ್ರದ ಫೋಟೋ ಶೂಟ್‌ ಆಗಿದ್ದು, ಆ ಫೋಟೋ ಶೂಟ್‌ನಲ್ಲಿ ಕ್ಲಿಕ್ಕಿಸಲಾದ ಕೆಲವು ಫೋಟೋಗಳನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಇನ್ನು ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ ಮಾಡಿದರೆ, ಕರುಣಾಕರನ್‌ ಅವರು ಛಾಯಾಗ್ರಹಣ ಮಾಡಲಿದ್ದಾರೆ. ಮಿಕ್ಕಂತೆ ಯಾವುದೇ ಕಲಾವಿದರ ಆಯ್ಕೆ ಆಗಿಲ್ಲ. ಚಿತ್ರೀಕರಣ ಪ್ರಾರಂಭವಾಗುವ ಹೊತ್ತಿಗೆ, ಉಳಿದ ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುತ್ತಾರೆ ಕೃಷ್ಣ.

“ಸದ್ಯಕ್ಕೆ “ದಿ ವಿಲನ್‌’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ನಮ್ಮ ಚಿತ್ರದ ಚಿತ್ರೀಕರಣ ಅಕ್ಟೋಬರ್‌ನಲ್ಲಿ ನಡೆಯಲಿದೆ. ಯಾವ ಪಾತ್ರಗಳನ್ನು ಯಾರಿಂದ ಮಾಡಿಸಬೇಕು ಎಂಬ ಆಯ್ಕೆ ನಡೆಯುತ್ತಿದೆ. ಆದರೆ, ಇದುವರೆಗೂ ಯಾರನ್ನೂ ಸಂಪರ್ಕಿಸಿಲ್ಲ. ಚಿತ್ರದ ಚಿತ್ರೀಕರಣ ದಿನಾಂಕಗಳು ಪಕ್ಕಾ ಫಿಕ್ಸ್‌ ಆಗುತ್ತಿದ್ದಂತೆಯೇ, ಕಲಾವಿದರನ್ನು ಸಂಪರ್ಕಿಸಿ ಕಾಲ್‌ಶೀಟ್‌ ಪಡೆಯಲಾಗುತ್ತದೆ’ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next