Advertisement
1921ರ ಜೂನ್ 28ರಂದು ಅವಿಭಜಿತ ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ಲಕೆ°àಪಳ್ಳಿ ಗ್ರಾಮದಲ್ಲಿ ತೆಲುಗು ನಿಯೋಗಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಪಮುಲಾಪರ್ತಿ ವೆಂಕಟ ನರಸಿಂಹ ರಾವ್ ಅವರು ಆಂಧ್ರದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದರು. ಅನಂತರ ನಾಗ ಪುರ ವಿವಿಯಲ್ಲಿ ಕಾನೂನು ಸ್ನಾತಕೋತ್ತರ ಪದವಿ ಪಡೆದು, ವಕೀಲರಾಗಿ ವೃತ್ತಿ ಆರಂಭಿಸಿದರು. 1930ರಲ್ಲಿ ಹೈದರಾಬಾದ್‌ನ ವಂದೇ ಮಾತರಂ ಚಳವಳಿಯಲ್ಲೂ ಅವರು ಭಾಗವಹಿಸಿದ್ದರು.
ಗಮನಾರ್ಹ ವಿಚಾರವೆಂದರೆ, ಪಿವಿಎನ್ ಅವರು ಪ್ರಧಾನಿಯಾಗುವ ಒಂದು ವರ್ಷ ಮುನ್ನ, ಅವರು ತಮ್ಮ ರಾಜಕೀಯ ಜೀವನವೇ ಮುಗಿಯಿತು ಎಂದು ಭಾವಿಸಿದ್ದರು. ತಮ್ಮ ಬ್ಯಾಗ್, ಪುಸ್ತಕಗಳನ್ನು ಪ್ಯಾಕ್ ಮಾಡಿಕೊಂಡು, ಕಂಪ್ಯೂಟರ್ ಮತ್ತು ಇತರ ವಸ್ತುಗಳನ್ನು ಹೈದರಾಬಾದ್‌ನಲ್ಲಿದ್ದ ತಮ್ಮ ಪುತ್ರನ ಮನೆಗೆ ಕಳುಹಿಸಿದ್ದರು. ಆದರೆ 1991ರ ಮೇ 21ರಂದು ರಾಜೀವ್ ಗಾಂಧಿ ಅವರ ಹತ್ಯೆ ನಡೆಯಿತು. ಈ ದುರಂತವು ರಾವ್ ಅವರ ರಾಜಕೀಯ ಪಯಣ ದಲ್ಲಿ ಹೊಸ ತಿರುವು ಪಡೆಯಲು ಕಾರಣವಾ ಯಿತು. ರಾಜೀವ್ ಅವರ ಅಂತಿಮ ದರ್ಶನ ಪಡೆಯಲು 10 ಜನಪಥ್‌ಗೆ ಬಂದಾಗ, ಅಲ್ಲೇ ಇದ್ದ ಕಾಂಗ್ರೆಸ್ ಹಿರಿಯ ನಾಯಕ ಪ್ರಣವ್ ಮುಖರ್ಜಿ ಅವರು, ರಾವ್‌ರನ್ನು ಪಕ್ಕಕ್ಕೆ ಕರೆದು, ನೀವೇ ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರಾಗ ಬೇಕೆಂದು ಸರ್ವಾನು ಮತದ ತೀರ್ಮಾನ ಆಗಿದೆ. ಇಂದೇ ನೀವು ಹುದ್ದೆಯನ್ನು ಸ್ವೀಕರಿಸ ಬೇಕು ಎಂದಿದ್ದರು. ಇದಾದ ಅನಂತರ, ಪಿ.ವಿ. ನರ ಸಿಂಹ ರಾವ್ ಅವರು ದೇಶದ 9ನೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. 1991ರಿಂದ 1996ರ ವರೆಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದರು.
Related Articles
ಸುಧಾರಣ ಕ್ರಮಗಳನ್ನು ಜಾರಿ ಮಾಡಲು ವಿತ್ತ ಸಚಿವರಾಗಿದ್ದ ಮನಮೋಹನ್ ಸಿಂಗ್ ಹಾಗೂ ಅವರ ತಂಡಕ್ಕೆ ಸಂಪೂರ್ಣ ಅಧಿಕಾರ ರಾವ್ ನೀಡಿದ್ದರು. ಆಮದು ನೀತಿಗೆ ಬದಲಾವಣೆ ತಂದ, ಖಾಸಗೀಕರಣಕ್ಕೆ ನಾಂದಿ ಹಾಡಿದ, ಜಾಗತಿಕ ಮಾರುಕಟ್ಟೆಗೆ ಭಾರತವನ್ನು ಮುಕ್ತವಾ ಗಿಸಿದ, ವಿದೇಶಿ ಹೂಡಿಕೆಗೆ ಉತ್ತೇಜನ ನೀಡಿದ, ಆರ್ಥಿಕ ಉದಾರೀಕರಣ ನೀತಿ ಜಾರಿಗೆ ತಂದ ಹಾಗೂ ಕಾರ್ಪೊರೇಟ್ ತೆರಿಗೆ ಹೆಚ್ಚಳ ಮಾಡಿದ ಹೆಗ್ಗಳಿಕೆಯೂ ರಾವ್ ಅವರಿಗೆ ಸಲ್ಲುತ್ತದೆ. ಇವಿಷ್ಟೇ ಅಲ್ಲದೆ, ಪಂಜಾಬ್‌ನಲ್ಲಿ ಭಯೋತ್ಪಾ ದನೆಗೆ ಅಂತ್ಯ ಹಾಡಿದ್ದು, ಜಮ್ಮು ಮತ್ತು ಕಾಶ್ಮೀರ ದಲ್ಲಿ ಯಶಸ್ವಿಯಾಗಿ ಚುನಾವಣೆ ಪ್ರಕ್ರಿಯೆ ಮುಗಿ ಸಿದ್ದು ಕೂಡ ರಾವ್ ಸಾಧನೆಗೆ ಮತ್ತಷ್ಟು ಗರಿ ಗಳನ್ನು ಮೂಡಿಸಿತ್ತು. ಬಹುಮತ ಇಲ್ಲದ ಹೊರ ತಾಗಿಯೂ ರಾವ್ ಅಂದು ತೋರಿದ ರಾಜಕೀಯ ಇಚ್ಛಾಶಕ್ತಿಯನ್ನು ದೇಶ ಮರೆಯದು.
Advertisement
ರಾವ್ ಸಾಧನೆಗಳುಜಾಗತೀಕರಣ, ಉದಾರೀಕರಣ, ಖಾಸಗೀಕರಣಕ್ಕೆ ದೇಶವನ್ನು ಮುಕ್ತಗೊಳಿಸಿದ್ದು
1991ರ ಆರ್ಥಿಕ ಸುಧಾರಣೆಗಳ ಮೂಲಕ ದೇಶದ ಆರ್ಥಿಕತೆಯನ್ನು ಹಳಿಗೆ ತಂದಿದ್ದು
ಪಂಜಾಬ್‌ನಲ್ಲಿ ಬಂಡುಕೋರ ರನ್ನು ಮಟ್ಟಹಾಕಿದ್ದು
ಜಮ್ಮು ಮತ್ತು ಕಾಶ್ಮೀರದಲ್ಲಿ ಯಶಸ್ವಿಯಾಗಿ ಚುನಾವಣೆ ಪ್ರಕ್ರಿಯೆ ನಡೆಸಿದ್ದು
ಆಂಧ್ರ ಸಿಎಂ ಆಗಿ ಭೂ ಸುಧಾರಣೆ ನೀತಿ ಜಾರಿಗೆ ತಂದಿದ್ದು