Advertisement

ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟರ್ ಬ್ಯಾಡ್ಮಿಂಟನ್‌; ಫೈನಲ್‌ನಲ್ಲಿ ಸಿಂಧುಗೆ ಆಘಾತಕಾರಿ ಸೋಲು

12:16 AM Apr 03, 2023 | Team Udayavani |

ಮ್ಯಾಡ್ರಿಡ್‌: ಇಲ್ಲಿ ನಡೆಯು ತ್ತಿರುವ ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟರ್ಸ್‌ ಸೂಪರ್‌-300 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಹಣಾಹಣಿಯಲ್ಲಿ ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ. ವಿ. ಸಿಂಧು ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್‌ ಅವರ ಕೈಯಲ್ಲಿ ಆಘಾತಕಾರಿ ಸೋಲನ್ನು ಕಂಡಿದ್ದಾರೆ.

Advertisement

ಗಾಯದಿಂದ 5 ತಿಂಗಳ ಸುದೀರ್ಘ‌ ವಿಶ್ರಾಂತಿಯ ಬಳಿಕ ಆಡಿದ ಸಿಂಧು ಅವರು ವಿಶ್ವದ 12ನೇ ಶ್ರೇಯಾಂಕಿತೆ ತುಂಜಂಗ್‌ ಅವರೆದುರು 8-21 8-21 ಗೇಮ್‌ಗಳಿಂದ ಸೋಲನ್ನು ಕಂಡು ನಿರಾಶೆಗೊಳಗಾದರು. ಹೊರಬಿದ್ದರು. ಅಮೋಘ ಆಟದ ಪ್ರದರ್ಶನ ನೀಡಿ ಫೈನಲಿಗೇರಿದ್ದ ಸಿಂಧು ಅವರು ಪ್ರಶಸ್ತಿ ನಿರ್ಣಾಯಕ ಹೋರಾಟದಲ್ಲಿ ಸಂಪೂರ್ಣ ವೈಫ‌ಲ್ಯ ಅನುಭವಿಸಿದರು.

ತುಂಜಂಗ್‌ ವಿರುದ್ಧ ಈ ಹಿಂದೆ 7-0 ಗೆಲುವಿನ ದಾಖಲೆ ಹೊಂದಿದ್ದರೂ ಸಿಂಧು ಈ ಬಾರಿ ಅವರನ್ನು ಸದೆ ಬಡಿಯಲು ವಿಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next