Advertisement

ನಾನು ಸೈನಾ ಹಾಯ್‌-ಬೈ ಫ್ರೆಂಡ್ಸ್‌ ಅಷ್ಟೇ: ಸಿಂಧು

06:15 AM Dec 31, 2017 | |

ಹೈದರಾಬಾದ್‌: “ಅನುಭವಿ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ನನಗೆ ಹಾಯ್‌-ಬೈ ಫ್ರೆಂಡ್‌ ಅಷ್ಟೇ’. ಹೀಗೆಂದವರು ಭಾರತದ ಮತ್ತೋರ್ವ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು. ನಿಮ್ಮ ಹಾಗೂ ಸೈನಾ ನಡುವಿನ ಫ್ರೆಂಡ್‌ಶಿಪ್‌ ಎಷ್ಟಿದೆ ಎನ್ನುವ ಪ್ರಶ್ನೆಗೆ ಸಿಂಧು ನೀಡಿದ ಉತ್ತರವಿದು.

Advertisement

“ಸೈನಾ ಜತೆಗೆ ವೈಯಕ್ತಿಕವಾಗಿ ಕುಳಿತು ಮಾತನಾಡಲು ನನಗೆ ಸಮಯವೇ ಇರಲ್ಲ. ಇಬ್ಬರೂ ಒಟ್ಟಿಗೆ ಅಭ್ಯಾಸ ಪಂದ್ಯದಲ್ಲಿ ಆಡುತ್ತೇವೆ. ಮುಖಾಮುಖೀಯಾದಾಗ ಗೆಲ್ಲಬೇಕು ಎನ್ನುವ ಕಿಚ್ಚಿನೊಂದಿಗೆ ಆಡುತ್ತೇವೆ. ನಮ್ಮ ನಡುವೆ ಆರೋಗ್ಯಕರ ಸ್ಪರ್ಧೆ ಇದೆ’ ಎಂದು ಸಿಂಧು ಹೇಳಿದರು.

ಸೈನಾ 2014ರಿಂದ ಗೋಪಿಚಂದ್‌ ಅಕಾಡೆಮಿಯಿಂದ ದೂರವಿದ್ದರು. ಬೆಂಗಳೂರಿನ ವಿಮಲ್‌ ಕುಮಾರ್‌ ಜತೆಗೆ ಕೋಚಿಂಗ್‌ ತೆಗೆದುಕೊಳ್ಳುತ್ತಿದ್ದರು. ಇದೀಗ ಮತ್ತೆ ಗೋಪಿಚಂದ್‌ ಅಕಾಡೆಮಿಗೆ ಸೇರಿಕೊಂಡಿದ್ದಾರೆ. ಸದ್ಯ ಇಬ್ಬರೂ ಒಂದೇ ಅಕಾಡೆಮಿಯಲ್ಲೇ ತರಬೇತಿ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next