Advertisement

ಮಲೇಶ್ಯ ಬ್ಯಾಡ್ಮಿಂಟನ್‌ ಸಿಂಧು, ಶ್ರೀಕಾಂತ್‌ ಸೆಮಿಗೆ

06:00 AM Jun 30, 2018 | Team Udayavani |

ಕೌಲಾಲಂಪುರ: ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್‌ ಮಲೇಶ್ಯ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.
ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ  ಸಿಂಧು ಅಗ್ರ ಶ್ರೇಯಾಂಕಿತ ಸ್ಪೇನ್‌ನ ಕ್ಯಾರೋಲಿನಾ ಮರಿನ್‌ ವಿರುದ್ಧ 22-20, 21-19 ಅಂತರದ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ವಿಶ್ವ ನಂ.1 ಆಟಗಾರ್ತಿ ಚೈನೀಸ್‌ ತೈಪೆಯ ತಾಯ್‌ ಜು ಯಿಂಗ್‌ ಅವರನ್ನು ಎದುರಿಸಲಿದ್ದಾರೆ.

Advertisement

4ನೇ ಶ್ರೇಯಾಂಕಿತ ಶ್ರೀಕಾಂತ್‌ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಜಪಾನ್‌ನ ಕೆಂಟೊ ಮೊಮೊಟ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ಫ್ರಾನ್ಸ್‌ನ ಬ್ರಿàಸ್‌ ಲೆವರ್‌ಡೆಜ್‌ ವಿರುದ್ಧ 21-18, 21-14 ಅಂತರದ ಜಯ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next