ಬರ್ಮಿಂಗ್ ಹ್ಯಾಮ್: ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಪಿವಿ ಸಿಂಧು, ಸೈನಾ ನೆಹ್ವಾಲ್ ,ಕಿಡಂಬಿ ಶ್ರೀಕಾಂತ್ ರವರು, ಪುಲ್ಲೇಲ ಗೋಪಿಚಂದ್ ಹಾಗೂ ಪ್ರಕಾಶ್ ಪಡುಕೋಣೆರವರ ಸಾಲಿಗೆ ಸೇರುವಲ್ಲಿ ವಿಫಲರಾಗಿದ್ದರೂ ಕೂಡಾ ಪಿವಿ ಸಿಂಧು ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿರುವುದು ಎಲ್ಲರಿಗೂ ತಿಳಿದಿದೆ.
ಇದನ್ನೂ ಓದಿ:ಪೀಪಲ್ಸ್ ಎಕಾನಮಿಯಂತೆ! ಎಲ್ಲಿತ್ತಪ್ಪಾ ಅದು?: ಸದನದಲ್ಲಿ ಸಿದ್ದರಾಮಯ್ಯ ಸವಾಲು
ಇತ್ತೀಚೆಗೆ ವೈರಲ್ ಆದ ‘ಕಚ್ಚಾ ಬಾದಾಮ್ ‘ ಹಾಡಿನ ಬಳಿಕ ,ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಡುವೆ ಸಿಂಧು ತಮಿಳಿನ ಮಯಕಿರೈ ಹಾಡಿಗೆ ಹೆಜ್ಜೆ ಹಾಕಿದ್ದಾರೆ,
ಡಾನ್ಸ್ ಮಾಡುವುದು ಒಂದು ಸಂತೋಷದ ಕ್ಷಣ ಎಂದು ಹ್ಯಾಶ್ ಟ್ಯಾಗ್ ನೊಂದಿಗೆ ಇನ್ಸ್ ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಂಗಳವಾರ ಶೇರ್ ಮಾಡಿದ ವಿಡಿಯೋಗೆ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ಡೇವಿಡ್ ವಾರ್ನರ್ ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ವಿಡಿಯೋದಲ್ಲಿ ನೀಲಿ ಜೀನ್ಸ್ ಮತ್ತು ಪಿಂಕ್ ಜಾಕೆಟ್ ಹಾಗೂ ಟೊಪ್ಪಿಯನ್ನು ಧರಿಸಿರುವುದು ಕಾಣಬಹುದು.
ಬ್ಯಾಡ್ಮಿಂಟನ್ ಪಂದ್ಯಾಟದ ಹಿನ್ನೆಲೆಯಲ್ಲಿ ಸದ್ಯ ಎಲ್ಲರ ಕಣ್ಣು ಲಕ್ಷ್ಯ ಸೇನ್ ಮೇಲೆ ಇರುವುದರಿಂದ, ಎರಡು ಒಲಿಂಪಿಕ್ ಪದಕ ವಿಜೇತೆ ಸಿಂಧು ಹಾಗೂ ವರ್ಲ್ಡ್ ಚಾಂಪಿಯನ್ ಶಿಪ್ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ 21 ವರ್ಷಗಳ ಬಳಿಕ ಪದಕದ ಬರ ನೀಗಿಸಲು ಎದುರು ನೋಡುತ್ತಿದ್ದಾರೆ. ಇಂದು ಬರ್ಮಿಂಗ್ ಹ್ಯಾಮ್ ನಲ್ಲಿ ಪಂದ್ಯ ನಡೆಯಲಿದೆ.