ಬಾಲಿ (ಇಂಡೋನೇಶ್ಯ): ಜರ್ಮನಿಯ ವೋನ್ ಲೀ ಅವರನ್ನು 21-12, 21-18 ನೇರ ಗೇಮ್‌ಗಳಲ್ಲಿ ಮಣಿಸುವ ಮೂಲಕ ಪಿ.ವಿ. ಸಿಂಧು “ಇಂಡೋನೇಶ್ಯ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿ’ಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ದ್ವಿತೀಯ ಗೇಮ್‌ನಲ್ಲಿ ಲೀ ಉತ್ತಮ ಹೋರಾಟ ನೀಡಿದರೂ ಸಿಂಧು ಅನುಭವಕ್ಕೆ ಸಾಟಿಯಾಗಲಿಲ್ಲ. ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಎದು ರಾಳಿ ದಕ್ಷಿಣ ಕೊರಿಯಾದ ಸಿಮ್ ಯುಜಿನ್. ಅವರು ಸ್ಪೇನಿನ ಬೀಟ್ರಿಜ್ ಕೊರಲೆಸ್ ವಿರುದ್ಧ 21-13, 21-14 ಅಂತರದಿಂದ ಗೆದ್ದು ಬಂದರು.
ಪ್ರಣೀತ್ ಮುನ್ನಡೆ:
ಪುರುಷರ ಸಿಂಗಲ್ಸ್‌ನಲ್ಲಿ ಬಿ. ಸಾಯಿಪ್ರಣೀತ್ ಕೂಡ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅವರು ಫ್ರಾನ್ಸ್‌ನ ಕ್ರಿಸ್ಟೊ ಪೊಪೋಟ್ ವಿರುದ್ಧ ಭಾರೀ ಹೋರಾಟ ನಡೆಸಿ 21-17, 14. 21-21-19 ಅಂತರದ ಜಯ ಸಾಧಿಸಿದರು.
ಆದರೆ ಭಾರತದ ಮತ್ತೋರ್ವ ಸಿಂಗಲ್ಸ್ ಆಟಗಾರ ಕೆ. ಶ್ರೀಕಾಂತ್ ಪರಾಭವಗೊಂಡರು. ಅವರನ್ನು ಒಲಿಂಪಿಕ್ಸ್ ಚಾಂಪಿಯನ್, ಡೆನ್ಮಾರ್ಕ್ ನ ವಿಕ್ಟರ್ ಅಕ್ಸೆಲ್ಸೆನ್ 21-14, 21-18ರಿಂದ ಪರಾಭವಗೊಳಿಸಿದರು. ಇನ್ನು ಸಾಯಿ ಪ್ರಣೀತ್-ಅಕ್ಸೆಲ್ಸೆನ್ ಮುಖಾಮುಖೀ ಆಗಲಿದ್ದಾರೆ.