ಟೋಕಿಯೊ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಟೋಕಿಯೊದಲ್ಲಿ ಶುಭಾರಂಭ ಮಾಡಿದ್ದಾರೆ. ರವಿವಾರ ನಡೆದ “ಜೆ’ ಗ್ರೂಪ್ ಪಂದ್ಯದಲ್ಲಿ ಇಸ್ರೇಲ್‌ನ ಕ್ಸೆನಿಯಾ ಪೊಲಿಕಾರ್ಪೋವಾ ಅವರನ್ನು 21-7, 21-10 ನೇರ ಗೇಮ್‌ಗಳಿಂದ ಸುಲಭದಲ್ಲಿ ಮಣಿಸಿದರು.
ವಿಶ್ವದ 7ನೇ ರ್‍ಯಾಂಕಿಂಗ್ ಆಟಗಾರ್ತಿಯಾಗಿರುವ ಸಿಂಧು ಮುಂದಿನ ಸುತ್ತಿನಲ್ಲಿ ಹಾಂಕಾಂಗ್‌ನ ಚೆಯುಂಗ್ ಎನ್‌ಗಾಯ್ ಯೀ ಅವರನ್ನು ಎದುರಿಸಲಿದ್ದಾರೆ. ಯೀ ವಿಶ್ವ ರ್‍ಯಾಂಕಿಂಗ್‌ನಲ್ಲಿ ಸಿಂಧುಗಿಂತ ಬಹಳ ಕೆಳ ರ್‍ಯಾಂಕಿಂಗ್‌ನಲ್ಲಿರುವುದರಿಂದ (34) ಇಲ್ಲಿಯೂ ಭಾರತೀಯಳ ಸುಲಭ ಗೆಲುವನ್ನು ನಿರೀಕ್ಷಿಸಲಾಗಿದೆ.
ಅತ್ಯಂತ ಬಿರುಸಿನಿಂದ ಆಟ ಆರಂಭಿಸಿದ ಸಿಂಧು 11-5 ಲೀಡ್‌ನೊಂದಿಗೆ ಮೊದಲಾರ್ಧ ಮುಗಿಸಿದರು. ಇಲ್ಲಿಂದ ಮುಂದೆ ಇನ್ನಷ್ಟು ಆಕ್ರಮಣಕಾರಿಯಾಗಿ ಗೋಚರಿಸಿದರು. ಸತತ 13 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡದ್ದು ಸಿಂಧು ಸಾಮರ್ಥ್ಯಕ್ಕೆ ಸಾಕ್ಷಿ. ತನ್ನ ಟ್ರೇಡ್‌ಮಾರ್ಕ್ ಎನಿಸಿದ ಸ್ಟ್ರೇಟ್ ಮತ್ತು ಕ್ರಾಸ್ ಕೋರ್ಟ್ ಸ್ಮ್ಯಾಶ್ ಮೂಲಕ ಇಸ್ರೇಲಿ ಆಟಗಾರ್ತಿಯನ್ನು ಒತ್ತಡಕ್ಕೆ ಸಿಲುಕಿಸಿದರು.
ಇದನ್ನೂ ಓದಿ :ಬೆಳ್ಳಿ ಗೆದ್ದ ಮಿರಾಗೆ ಡೊಮಿನೋಸ್ ನಿಂದ ಜೀವಮಾನದುದ್ದಕ್ಕೂ ಉಚಿತ ಪಿಜಾ ಆಫರ್
ದ್ವಿತೀಯ ಗೇಮ್‌ನಲ್ಲೂ ಸಿಂಧು ಇದೇ ಆಟವನ್ನು ಪುನರಾ ವರ್ತಿಸಿದರು. ಇಸ್ರೇಲಿ ಆಟಗಾರ್ತಿಯ ಚೇತರಿಕೆಗೆ ಅವಕಾಶವೇ ಸಿಗಲಿಲ್ಲ.