Advertisement
ಮಂಗಳವಾರ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 6ನೇ ರ್‍ಯಾಂಕಿಂಗ್ ಆಟಗಾರ್ತಿ ಸಿಂಧು ಎದುರಾಳಿ ರಶ್ಯದ ಎವೆYàನಿಯಾ ಕೊಸೆಟ್ಸ್‌ಕಾಯಾ. ಗೆಲುವಿನ ಓಟ ಮುಂದುವರಿಸಿದರೆ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ತೈ ಜು ಯಿಂಗ್ ಎದುರಾಗುವ ಸಾಧ್ಯತೆ ಇದೆ.ಬಾಸೆಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಿರೀಟ ಏರಿಸಿಕೊಂಡ ಸಿಂಧೂ, ಅನಂತರ ಇದೇ ಜೋಶ್ ಕಾಯ್ದುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದರು. ಟೋಕಿಯೊ ಒಲಿಂಪಿಕ್ಸ್‌ಗೆ ಇನ್ನೂ ಕೇವಲ 7 ತಿಂಗಳು ಬಾಕಿ ಇರುವುದರಿಂದ ಸಿಂಧೂ ಪಾಲಿಗೆ ಈ ಟೂರ್ನಿ ಮಹತ್ವದ್ದಾಗಿದ್ದು, ಕಳಪೆ ಫಾರ್ಮ್ನಿಂದ ಹೊರಬರಲು ಉತ್ತಮ ಅವಕಾಶವಾಗಿದೆ.
ಭಾರತದ ಮತ್ತೋರ್ವ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಕಣದಲ್ಲಿದ್ದಾರೆ. ಸೈನಾ ಕೂಡ ಕಳೆದ ವರ್ಷ ಇಂಡೋನೇಶ್ಯ ಮಾಸ್ಟರ್ ಪ್ರಶಸ್ತಿ ಎತ್ತಿದ ಬಳಿಕ ಮಂಕಾಗುತ್ತ ಹೋಗಿದ್ದರು. ಇಲ್ಲಿ ಕ್ವಾಲಿಫೈಯರ್ ಆಟಗಾರ್ತಿಯನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಉಳಿದಂತೆ ಕೆ. ಶ್ರೀಕಾಂತ್, ಪಿ. ಕಶ್ಯಪ್, ಬಿ. ಸಾಯಿ ಪ್ರಣೀತ್, ಸೌರಭ್ ವರ್ಮ, ಪುರುಷರ ಡಬಲ್ಸ್ ವಿಭಾಗದ ಭರವಸೆಯ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ -ಚಿರಾಗ್ ಶೆಟ್ಟಿ, ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಕೂಡ ವರ್ಷಾರಂಭದ ಟೂರ್ನಿಯಲ್ಲಿ ಗೆಲುವನ್ನು ಎದುರು ನೋಡುತ್ತಿದ್ದಾರೆ.
Related Articles
ಪಿ. ಕಶ್ಯಪ್ ವಿಶ್ವದ ಅಗ್ರಮಾನ್ಯ ಆಟಗಾರ ಕೆಂಟೊ ಮೊಮೊಟ ಅವರನ್ನು ಮೊದಲ ಸುತ್ತಿನಲ್ಲೇ ಎದುರು ಹಾಕಿಕೊಳ್ಳಬೇಕಿದೆ. ಎಚ್.ಎಸ್. ಪ್ರಣಯ್ ಜಪಾನಿನ ಮತ್ತೂಬ್ಬ ಆಟಗಾರ ಕಾಂಟ ತ್ಸುನೆಯಾಮ ವಿರುದ್ಧ ಆಡಲಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ಗಾಗಿ ತಯಾರಿ ನಡೆಸಲು ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಿಂದ ಹೊರಗುಳಿದಿರುವ ಕೆ. ಶ್ರೀಕಾಂತ್ 2ನೇ ಶ್ರೇಯಾಂಕದ ಚೊ ಟೀನ್ ಚೆನ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಸಾಯಿ ಪ್ರಣೀತ್ ಅವರ ಎದುರಾಳಿ ಡೆನ್ಮಾರ್ಕ್‌ನ ರಾಸ್ಮಸ್ ಜಿಮೆR. ಸಮೀರ್ ವರ್ಮ ಥಾಯ್ಲೆಂಡ್‌ನ ಪಂಟಫೊನ್ ವಾಂಗ್‌ಚರೋನ್ ಅವರನ್ನು ಎದುರಿಸುವರು.
Advertisement