Advertisement

“ಪ್ಲೀಸ್‌, ಬಿಟ್ಟುಬಿಡಿ’! ಬಾಬ್ರಿ ಮಸೀದಿ ಧ್ವಂಸದ ಮರುದಿನ ಅಂದಿನ ಪ್ರಧಾನಿಯ ಪ್ರತಿಕ್ರಿಯೆ

12:11 AM Nov 15, 2021 | Team Udayavani |

ಹೊಸದಿಲ್ಲಿ: “ದಯವಿಟ್ಟು ಆ ವಿಚಾರವನ್ನು ನನ್ನ ಬಳಿ ಚರ್ಚಿಸಬೇಡಿ. ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ’ – 1992ರ ಡಿ. 6ರಂದು ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಧ್ವಂಸ­ಗೊಂಡ ಅನಂತರ, ಮರುದಿನ ಬೆಳಗ್ಗೆ ನಡೆದಿದ್ದ ಕೇಂದ್ರ ಸಚಿವರ ಸಭೆಯಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಹೇಳಿದ ಮಾತಿದು. ಹೀಗೆಂದು, ಹಿರಿಯ ಕಾಂಗ್ರೆಸಿಗ ಸಲ್ಮಾನ್‌ ಖುರ್ಷಿದ್‌ ತಮ್ಮ ಇತ್ತೀಚಿನ ಪುಸ್ತಕವಾದ “ಸನ್‌ರೈಸ್‌ ಓವರ್‌ ಅಯೋಧ್ಯಾ: ನೇಶನ್‌ಹುಡ್‌ ಇನ್‌ ಅವರ್‌ ಟೈಮ್ಸ್‌’ನಲ್ಲಿ ಬರೆದಿದ್ದಾರೆ.

Advertisement

ಡಿ. 6ರಂದು ಬಾಬ್ರಿ ಮಸೀದಿ ಧ್ವಂಸ ನಡೆದಿತ್ತು. ಡಿ. 7ರ ಬೆಳಗ್ಗೆ ಸಂಸತ್‌ ಭವನದ ಕೆಳ ಅಂತಸ್ತಿನಲ್ಲಿ ಪ್ರಧಾನಿ ನೇತೃತ್ವ­ದಲ್ಲಿ ಕೇಂದ್ರ ಸಂಪುಟದ ಎಲ್ಲ ಸಚಿವರ ಸಭೆ ಆಯೋಜಿ­ಸಲಾಗಿತ್ತು. ಸಭೆಗೆ ಬಂದವರಲ್ಲಿ ಪ್ರಧಾನಿ ಸಮೇತ ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.

ಒಂದು ರೀತಿಯ ದಿಗ್ಮೂ­ಢ­ತೆ­ಯಲ್ಲಿದ್ದರು. ಸ್ವಲ್ಪ ಸಮಯದ ಅನಂತರ ಗಾಢ ಮೌನ ಮುರಿದ ಮಾಧವರಾವ್‌ ಸಿಂಧಿಯಾ, ಮಸೀದಿ ಧ್ವಂಸದ ವಿಚಾರವನ್ನು ಪ್ರಧಾನಿ ಮುಂದಿಟ್ಟಾಗ, ರಾವ್‌ ಅವರು ಬೇಸರದಿಂದ ನನ್ನನ್ನು ಬಿಟ್ಟುಬಿಡಿ ಎಂದರು. ಅನಿರೀಕ್ಷಿತವಾಗಿ ಬಂದ ಈ ಉತ್ತರದಿಂದಾಗಿ, ಸಚಿವರ ಸಭೆ ಅಲ್ಲಿಗೇ ಮುಕ್ತಾಯವಾಯಿತು ಎಂದು ಪುಸ್ತಕದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.