Advertisement

ಗ್ರಾ.ಪಂ. ಪಕ್ಕದಲ್ಲೇ ಘನತ್ಯಾಜ್ಯ ಘಟಕ ನಿರ್ಮಾಣ

08:55 AM Jan 18, 2019 | Team Udayavani |

ಪುತ್ತೂರು : ಗ್ರಾಮ ಪಂಚಾ ಯತ್‌ ವ್ಯಾಪ್ತಿಯಲ್ಲಿ ಬಾಕಿ ಆಗಿರುವ ಘನ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ವೇಗ ನೀಡಿ, ಸ್ವಚ್ಛತಾ ಕಾರ್ಯಕ್ಕೆ ಜೀವ ತುಂಬಲು ಜಿ.ಪಂ. ಆಲೋಚಿಸುತ್ತಿದೆ. ಘನತ್ಯಾಜ್ಯವನ್ನು ಸುಲಭವಾಗಿ ನಿರ್ವಹಣೆ ಮಾಡುವ ಉದ್ದೇಶದಿಂದ ಗ್ರಾ.ಪಂ. ಪಕ್ಕದಲ್ಲೇ ಘಟಕ ನಿರ್ಮಾಣಕ್ಕೆ ನಿವೇಶನ ಕಾದಿರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾ ಸ್ವಚ್ಛತಾ ಸಮಾಲೋಚಕ ನವೀನ್‌ ಹೇಳಿದರು.

Advertisement

ನಮ್ಮ ತ್ಯಾಜ್ಯ- ನಮ್ಮ ಹೊಣೆ ಪರಿಕಲ್ಪನೆಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಕುರಿತು ಜ. 17ರಂದು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ಗ್ರಾ.ಪಂ.ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ಇದಕ್ಕೆ ಕಾರಣ ವಿಲೇವಾರಿ ಸರಿ ಆಗದೇ ಇರುವುದು. ಈ ಹಿನ್ನೆಲೆಯಲ್ಲಿ ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಪ್ರತಿ ಗ್ರಾ.ಪಂ.ಗೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಹಾಗೂ ತ್ಯಾಜ್ಯ ಸಂಗ್ರಹಿಸಿ ಸಾಗಾಟ ಮಾಡಲು ವಾಹನ ಖರೀದಿ ಸೇರಿದಂತೆ ಒಟ್ಟು 20 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ ಎಂದರು.

ಡಸ್ಟ್‌ಬಿನ್‌ ಮುಕ್ತ
ಉಡುಪಿ ಜಿಲ್ಲಾ ಸ್ವಚ್ಛತಾ ಸಮಾಲೋಚಕ ರಘುನಾಥ ಮಾತನಾಡಿ, ಡಸ್ಟ್‌ಬಿನ್‌ನಲ್ಲಿ ತ್ಯಾಜ್ಯ ತುಂಬಿಸಿ, ಅಲ್ಲಿಂದ ವಿಲೇವಾರಿ ಮಾಡುವುದು ತೀರಾ ಅವೈಜ್ಞಾನಿಕ ಕ್ರಮವಾದುದರಿಂದ ಗ್ರಾಮವನ್ನು ಡಸ್ಟ್‌ ಬಿನ್‌ ಮುಕ್ತವಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Advertisement

ಸಂಯೋಜಕಿ ಮಂಜುಳಾ ಮಾಹಿತಿ ನೀಡಿದರು. ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಉಪಾಧ್ಯಕ್ಷೆ ರಾಜೇಶ್ವರಿ, ಹರೀಶ್‌ ಬಿಜತ್ರೆ, ಸಾಜ ರಾಧಾಕೃಷ್ಣ ಆಳ್ವ, ಮೀನಾಕ್ಷಿ ಮಂಜುನಾಥ, ಲಲಿತಾ ಈಶ್ವರ, ಜಿ.ಪಂ. ಸದಸ್ಯೆ ಶಯನಾ ಜಯಾನಂದ, ತಾಲೂಕಿನ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next