Advertisement

ತಾ|ಮಟ್ಟದ ಆ್ಯತ್ಲೆಟಿಕ್ಸ್‌: ಫಿಲೋಮಿನಾ ಚಾಂಪಿಯನ್‌

03:30 PM Nov 09, 2018 | Team Udayavani |

ದರ್ಬೆ: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನೂಜಿಬಾಳ್ತಿಲ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ.ಪೂ. ಕಾಲೇಜುಗಳ ಆ್ಯತ್ಲೆಟಿಕ್ಸ್‌ನಲ್ಲಿ ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಹುಡುಗರ ತಂಡವು 11 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕಗಳೊಂದಿಗೆ ಒಟ್ಟು 83 ಅಂಕಗಳನ್ನು ಪಡೆದು ಸಮಗ್ರ ಪ್ರಶಸ್ತಿ ಹಾಗೂ 5 ಚಿನ್ನ, 6 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ಪಡೆದು ಒಟ್ಟು 50 ಅಂಕಗಳನ್ನು ಪಡೆದ ಹುಡುಗಿಯರ ವಿಭಾಗದ ತಂಡ ರನ್ನರ್ಸ್‌ ಪ್ರಶಸ್ತಿ ಪಡೆದುಕೊಂಡಿದೆ.

Advertisement

ಹುಡುಗರ ವಿಭಾಗದಲ್ಲಿ ಪ್ರೀತಂ ರೈ ಲಾಂಗ್‌ಜಂಪ್‌, ತ್ರಿವಿಧ ಜಿಗಿತ, ಜಾವೆಲಿನ್‌ ಥ್ರೋ, 4×100 ಮೀ. ರಿಲೇಯಲ್ಲಿ 4 ಚಿನ್ನ, ಭವಿತ್‌ ಕುಮಾರ್‌ ಪೋಲ್‌ ವಾಲ್ಟ್ ಹಾಗೂ ಹೈಜಂಪ್‌ನಲ್ಲಿ 2 ಚಿನ್ನ, ಎಲ್ಸನ್‌ ಪಿರೇರಾ 200 ಮೀ., 4×100 ಮೀ. ರಿಲೇಯಲ್ಲಿ 2 ಚಿನ್ನ, ಮೊಹಮ್ಮದ್‌ ಉನೈಜ್‌ 100 ಮೀ. 
200 ಮೀ., 4×100 ಮೀ. ರಿಲೇಯಲ್ಲಿ 2 ಚಿನ್ನ ಹಾಗೂ 1 ಬೆಳ್ಳಿ, ತಿಲಕ್‌ ಗೌಡ 400 ಮೀ., 4×100 ಮೀ. ರಿಲೇಯಲ್ಲಿ 1 ಚಿನ್ನ ಹಾಗೂ 1 ಬೆಳ್ಳಿ, ವಿನೀತ್‌ ಜಿ.ಆರ್‌. ಡಿಸ್ಕಸ್‌ ತ್ರೋ ಹಾಗೂ ಹ್ಯಾಮರ್‌ ತ್ರೋನಲ್ಲಿ 2 ಚಿನ್ನ, ಭವಿತ್‌ ಪೋಲ್‌ವಾಲ್ಟ್ ಹಾಗೂ 110 ಮೀ. ಹರ್ಡಲ್ಸ್‌ನಲ್ಲಿ 2 ಬೆಳ್ಳಿ, ರಿಕ್ಸನ್‌ ಮಾರ್ಟಿಸ್‌ 400 ಮೀ. ಹರ್ಡಲ್ಸ್‌, 4×100 ಮೀ. ರಿಲೇಯಲ್ಲಿ 1 ಚಿನ್ನ, 1 ಕಂಚು, ರೆಲ್ವಿನ್‌ 4×100 ಮೀ. ರಿಲೇಯಲ್ಲಿ 1 ಬೆಳ್ಳಿ, ಲೋಹಿತ್‌ ಎ. 5 ಕಿ.ಮೀ ನಡಿಗೆಯಲ್ಲಿ 1 ಕಂಚು, ಮೊಹಮ್ಮದ್‌ ಮೊಯಿನ್‌ ಹೈಜಂಪ್‌ನಲ್ಲಿ 1 ಬೆಳ್ಳಿ, ನಿಶ್ಚಿತ್‌ ರೈ ಹ್ಯಾಮರ್‌ ಎಸೆತದಲ್ಲಿ 1 ಬೆಳ್ಳಿ, ಮಂಜುನಾಥ್‌ 4×100 ಮೀ. ರಿಲೇಯಲ್ಲಿ ಬೆಳ್ಳಿ ಹಾಗೂ ಆ್ಯಸ್ಟನ್‌ ಡಿ’ಸೋಜಾ 4×100 ಮೀ. ರಿಲೇಯಲ್ಲಿ 1 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಹುಡುಗಿಯರ ವಿಭಾಗ
ನೇಹಾ 100 ಮೀ., 200 ಮೀ., 400 ಮೀ., 4×100 ಮೀ. ಮತ್ತು 4×100 ಮೀ. ರಿಲೇಯಲ್ಲಿ 1 ಚಿನ್ನ, 2 ಬೆಳ್ಳಿ, 2 ಕಂಚು, ಹರ್ಷಿತಾ ಎ. 800 ಮೀ., 1500 ಮೀ., 3,000 ಮೀ., 4×100 ಮೀ. ಮತ್ತು 4×400 ಮೀ. ರಿಲೇಯಲ್ಲಿ 2 ಚಿನ್ನ, 1 ಬೆಳ್ಳಿ, 3 ಕಂಚು, ಧನ್ಯಶ್ರೀ ಹ್ಯಾಮರ್‌ ತ್ರೋ, ಜಾವೆಲಿನ್‌ ತ್ರೋ, ಶಾಟ್‌ಪುಟ್‌ನಲ್ಲಿ 1 ಚಿನ್ನ, 1 ಬೆಳ್ಳಿ, 1 ಕಂಚು, ಅಂಕಿತಾ ಬಿ. ಲಾಂಗ್‌ ಜಂಪ್‌, ಟ್ರಿಪಲ್‌ ಜಂಪ್‌ನಲ್ಲಿ 1 ಬೆಳ್ಳಿ, 1 ಕಂಚು, ಹರ್ಷಿತಾ ಶೆಟ್ಟಿ ಪೋಲ್‌ವಾಲ್ಟ್ನಲ್ಲಿ 1 ಬೆಳ್ಳಿ, ರಕ್ಷಾ ಅಂಚನ್‌ 5 ಕಿ.ಮೀ ನಡಿಗೆ, 4×100 ಮೀ. ರಿಲೇಯಲ್ಲಿ 1 ಚಿನ್ನ, 1 ಬೆಳ್ಳಿ, ನಯನಾ 4×100 ಮೀ. ರಿಲೇಯಲ್ಲಿ 1 ಕಂಚು, ದಿವ್ಯಾ ಕೆ. ಪೋಲ್‌ವಾಲ್ಟ್  ನಲ್ಲಿ 1 ಕಂಚು ಹಾಗೂ ಮಹಿಮಾ ರಾಜ್‌ 400 ಮೀ., 4×100 ಮೀ. ರಿಲೇಯಲ್ಲಿ 1 ಬೆಳ್ಳಿ, 1 ಕಂಚಿನ ಪದಕಗಳನ್ನು ಪಡೆದಿದ್ದಾರೆ.

ವೈಯಕ್ತಿಕ ಚಾಂಪಿಯನ್‌
ಪ್ರೀತಂ ರೈ ಲಾಂಗ್‌ಜಂಪ್‌, ಟ್ರಿಪಲ್‌ ಜಂಪ್‌, ಜಾವೆಲಿನ್‌ ತ್ರೋ, 4×100 ಮೀ. ರಿಲೇಯಲ್ಲಿ 4 ಚಿನ್ನದ ಪದಕಗಳನ್ನು ಪಡೆದು ಹುಡುಗರ ವಿಭಾಗದ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಹುಡುಗರ ವಿಭಾಗದಲ್ಲಿ ಪ್ರೀತಂ ರೈ, ಭವಿತ್‌ ಕುಮಾರ್‌, ವಿನೀತ್‌ ಜಿ.ಆರ್‌., ಮಹಮ್ಮದ್‌ ಉನೈಜ್‌, ಎಲ್ಸನ್‌ ಪಿರೇರಾ, ತಿಲಕ್‌ ಗೌಡ, ರಿಕ್ಸನ್‌ ಮಾರ್ಟಿಸ್‌, ಭವಿತ್‌, ಮಹಮ್ಮದ್‌ ಮೊಯಿನ್‌, ನಿಶ್ಚಿತ್‌ ರೈ ಹಾಗೂ ಹುಡುಗಿಯರ ವಿಭಾಗದಲ್ಲಿ ನೇಹಾ, ಹರ್ಷಿತಾ ಎ., ಧನ್ಯಶ್ರೀ, ರಕ್ಷಾ ಅಂಚನ್‌, ಅಂಕಿತಾ, ಹರ್ಷಿತಾ ಶೆಟ್ಟಿ ಸೇರಿ 16 ವಿದ್ಯಾರ್ಥಿಗಳು ನ. 10 ಹಾಗೂ 11ರಂದು ಮೂಡಬಿದಿರೆ ಆಳ್ವಾಸ್‌ನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next