Advertisement

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

08:35 PM Oct 06, 2024 | Team Udayavani |

ಪುತ್ತೂರು: ರವಿವಾರ ಸಂಜೆ ಸುರಿದ ಭಾರೀ ಮಳೆಯಿಂದ ನವರಾತ್ರಿ ಉತ್ಸವದ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯ ಅಂಗಣ, ಗರ್ಭಗುಡಿ ಸುತ್ತ ಜಲಾವೃತಗೊಂಡಿತು. ಭಕ್ತರು ಈ ಅಪೂರ್ವ ಕ್ಷಣ ಕಣ್ತುಂಬಿಕೊಂಡರು.

Advertisement

ದೇವಾಲಯದ ಅಂಗಣಕ್ಕೆ ಪ್ರವೇಶಿಸಿದ ನೀರು ಆ ಬಳಿಕ ಗರ್ಭಗುಡಿಯ ಸುತ್ತ ಆವರಿಸಿಕೊಂಡಿತ್ತು. ಕೆಲ ತಾಸಿನ ಬಳಿಕ ನೀರಿನ ಮಟ್ಟ ಇಳಿಕೆ ಕಂಡಿತ್ತು. ಸ್ವಚ್ಛತಾ  ಕಾರ್ಯದ ಬಳಿಕ ನವರಾತ್ರಿ ಉತ್ಸವದ ಐದನೇ ದಿನದ ಕಾರ್ಯಕ್ರಮ ನಡೆಯಿತು. ಇಲ್ಲಿ ವರ್ಷಕೊಮ್ಮೆ ಜಲದುರ್ಗಾದೇವಿ ದೇವಾಲಯ ಜಲಾವೃತವಾಗುವುದು ವಾಡಿಕೆ.

Advertisement

Udayavani is now on Telegram. Click here to join our channel and stay updated with the latest news.

Next