Advertisement
ಸವಾರ ಸುಳ್ಯ ಕೊಡಿಯಾಲ ಮೂಲದ ಲೋಲಾಕ್ಷ (24) ಮತ್ತು ಸಹಸವಾರ ಸುಳ್ಯ ಚೊಕ್ಕಾಡಿ ಮೂಲದ ಗೌತಮ್ (26) ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳ್ಳಾರೆ ಕಡೆಯಿಂದ ಕೂಲಿ ಕೆಲಸ ಮುಗಿಸಿ ಹಿಂದಿರುಗುವ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಹಿಂಬದಿ ಸವಾರ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರ ಗಾಯವಾಗಿದೆ. ಕಾಲಿಗೆ ತೀವ್ರ ತರವಾದ ಗಾಯವಾಗಿದೆ.
ಗಾಯಾಳುಗಳು ರಸ್ತೆಯಲ್ಲೇ ಬಿದ್ದು 10-15 ನಿಮಿಷಗಳ ಕಾಲ ನರಳಾಡುತ್ತಿದ್ದರೂ, ಯಾರೊಬ್ಬರೂ ಅವರನ್ನು ಆಸ್ಫತ್ರೆಗೆ ದಾಖಲಿಸಲು ಮುಂದಾಗಿಲ್ಲ. ಕೆಲ ಹೊತ್ತಿನ ಬಳಿಕ ಖಾಸಗಿ ವಾಹನದ ಮೂಲಕ ಸಾಗಿಸಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.