Advertisement

ಪುತ್ತೂರು; ಪತ್ನಿಯ ಮನೆಗೆ ಬಂದ ವ್ಯಕ್ತಿಯಲ್ಲಿ ಸೋಂಕು ಪತ್ತೆ

01:11 PM Jun 24, 2020 | mahesh |

ಪುತ್ತೂರು: ಬನ್ನೂರಿನಲ್ಲಿರುವ ಪತ್ನಿಯ ಮನೆಗೆ ಬಂದ ಕಲ್ಲಂದಡ್ಕ ನಿವಾಸಿಯೊಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಇದೀಗ ನಗರಸಭಾ ವ್ಯಾಪ್ತಿಯಲ್ಲೇ 2ನೇ ಪ್ರಕರಣ ದಾಖಲಾಗಿರುವುದು ಆತಂಕ ಹೆಚ್ಚಾಗಿದೆ.

Advertisement

ಕಲ್ಲಂದಡ್ಕದ ಸುಮರು 42 ವರ್ಷ ಪ್ರಾಯದ ಪೈಂಟರ್ ಒಬ್ಬರಿಗೆ ಕೋವಿಡ್ ದೃಢಪಟ್ಟಿದ್ದು, ಅವರು ಬನ್ನೂರಿನಲ್ಲಿರುವ ಚೆಲುವಮ್ಮನ ಕಟ್ಟೆ ಬಳಿಯ ಪತ್ನಿಯ ತವರು ಮನೆಗೆ ಬಂದಿದ್ದರು. ಪತ್ನಿ ಮನೆಗೆ ಬಂದಿದ್ದ ಗಂಡನಿಗೆ ಜ್ವರ ಶೀತ ಬಾಧೆಯೆಂದು 2 ದಿನಗಳ ಹಿಂದೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ್ದರು. ಅಲ್ಲಿ ಅವರ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸಿ ಕೋವಿಡ್ ಪರೀಕ್ಷೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವ ವರದಿ ಬಂದಿದ್ದು, ವ್ಯಕ್ತಿಯನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವ್ಯಕ್ತಿಯ ಪತ್ನಿ ಮತ್ತು ಆಕೆಯ 10 ದಿನದ ಮಗು ಮನೆಯಲ್ಲೇ ಹೋಮ್ ಕೊರಂಟೈನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next