Advertisement

ಪುತ್ತೂರು: ಅಂತರ್ ರಾಜ್ಯ ಸರ ಗಳ್ಳರಿಬ್ಬರ ಬಂಧನ; ಹಲವು ಪ್ರಕರಣಗಳಲ್ಲಿ ಭಾಗಿ

06:12 PM Jul 22, 2022 | Team Udayavani |

ಪುತ್ತೂರು: ಗ್ರಾಮಾಂತರ ಠಾಣಾ ಪೊಲೀಸರು ಅಂತರ್ ರಾಜ್ಯ ಸರ ಕಳ್ಳತನದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಗಳು ಕಾಸರಗೋಡು ಜಿಲ್ಲೆಯ ಕುಂಬ್ಳೆ ಬಂಬ್ರಾಣದ ಫಝಲ್.ಎ (37) ಮತ್ತು ಸೀತಾಂಗೋಳಿ ರಾಜೀವ ಗಾಂಧಿ ಕಾಲೊನಿಯ ಅಬ್ದುಲ್ ನಿಝಾರ್ (19 ) ಎನ್ನುವವರಾಗಿದ್ದಾರೆ. ಎರಡು ಬೈಕ್ ಮತ್ತು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ನಿಡ್ನಳ್ಳಿ ಗ್ರಾಮದ ಚೂರಿಪದವು ನಿವಾಸಿ ರತ್ನಾ ಎಂಬವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿ ಮಣಿ ಸರವನ್ನು ಜೂನ್ 07 ಬೆಳಗ್ಗೆ ಬೆಟ್ಟಂಪಾಡಿ ಗ್ರಾಮದ ಕೋನಡ್ಕ ಎಂಬಲ್ಲಿಇಬ್ಬರು ವ್ಯಕ್ತಿಗಳು ಕೆಂಪು ಬಣ್ಣದ ಬೈಕ್ ನಲ್ಲಿ ಬಂದು ಎಳೆದು ಪರಾರಿಯಾಗಿದ್ದರು. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಗೆ ಮತ್ತು ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್ ಐ ಉದಯರವಿ.ಎಂ.ವೈ ರವರ ನೇತೃತ್ವದ ವಿಶೇಷ ತಂಡವು ಇಬ್ಬರನ್ನು ಬಂಧಿಸಿ ಸುಲಿಗೆ ಮಾಡಿದ 50 ಸಾವಿರ ಮೌಲ್ಯದ ತುಂಡಾದ ಚಿನ್ನದ ಕರಿಮಣಿ ಸರ ಹಾಗೂ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಎಫ್ ಝಡ್ ಬೈಕ್ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಕೆಂಪು ಬಣ್ಣದ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳ ಹೆಚ್ಚಿನ ವಿಚಾರಣೆ ಮಾಡಿದಾಗ ಈ ಹಿಂದೆ 2019 ರಲ್ಲಿ ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವು ಜಗನ್ನಾಥ ಶೆಟ್ಟಿರವರ ಮಾಲಕತ್ವದ ಪೆಟ್ರೋಲ್ ಪಂಪ್ ನಲ್ಲಿ ಕಳ್ಳತನ ಪ್ರಕರಣ, ವಿಟ್ಲ ಠಾಣಾ ವ್ಯಾಪ್ತಿಯ ಕಾಶಿಮಠ ಎಂಬಲ್ಲಿ ಗೂಡ್ಸ್ ಟೆಂಪೋ ಕಳ್ಳತನ ಪ್ರಕರಣ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಬೈಪಾಸ್ ರಸ್ತೆಯಲ್ಲಿ ಮಹಿಳೆಯ ಸರ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.

Advertisement

ಆರೋಪಿ ಫಝಲ್.ಎ ವಿರುದ್ಧ ಮಂಗಳೂರು ನಗರದ ಉಳ್ಳಾಲ , ಮಂಜೇಶ್ವರ , ಕುಂಬ್ಳೆ , ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣವು ದಾಖಲಾಗಿವೆ.

ಪ್ರಕರಣದ ತನಿಖೆಯಲ್ಲಿ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಣೆ , ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನಾ.ಪಿ.ಕುಮಾರ್ ಪುತ್ತೂರು ಉಪವಿಭಾಗರವರ ನೇತೃತ್ವದಲ್ಲಿ, ಉಮೇಶ್ ಯು , ಪೊಲೀಸ್ ವೃತ್ತ ನಿರೀಕ್ಷಕರು ಪುತ್ತೂರು ಗ್ರಾಮಾಂತರ ವೃತ್ತ , ಉದಯರವಿ.ಎಂ.ವೈ ಹಾಗೂ ರಾಮಕೃಷ್ಣ.ಜಿ.ಸಿ ಪೊಲೀಸು ಉಪನಿರೀಕ್ಷಕರು ಪುತ್ತೂರು ಗ್ರಾಮಾಂತರ ಠಾಣೆ ವಿಶೇಷ ತಂಡದ ಸಿಬ್ಬಂದಿಗಳಾದ ದೇವರಾಜ್ , ಧರ್ಣಪ್ಪ ಗೌಡ , ಅದ್ರಾಮ್ , ಸತೀಶ್ , ಪ್ರವೀಣ್ , ವರ್ಗೀಸ್ , ಜಗದೀಶ್ , ಹರ್ಷಿತ್ , ಚಾಲಕ ಸದ್ದಾಂ ಮುಲ್ಲಾರವರು ಹಾಗು ಜಿಲ್ಲಾ ಗಣಕಯಂತ್ರದ ಸಿಬ್ಬಂದಿಗಳಾದ ಸಂಪತ್ , ದಿವಾಕರ್ ರವರು ಸಹಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next