Advertisement

ಎಸೆಸೆಲ್ಸಿ: ಪುತ್ತೂರಿಗೆ ಶೇ. 86, ಸುಳ್ಯಕ್ಕೆ ಶೇ. 85

11:10 AM May 01, 2019 | Team Udayavani |

ಪುತ್ತೂರು: ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗೆ ಪುತ್ತೂರು ತಾಲೂಕಿನ ಒಟ್ಟು 76 ಶಾಲೆಗಳಿಂದ ಹಾಜರಾದ 4,772 ವಿದ್ಯಾರ್ಥಿಗಳಲ್ಲಿ 4,125 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ. 86.44 ಫಲಿತಾಂಶ ದಾಖಲಾಗಿದೆ.

Advertisement

ಒಟ್ಟು 647 ಮಂದಿ ಅನುತ್ತೀರ್ಣರಾಗಿದ್ದಾರೆ. . 2017- 18ನೇ ಸಾಲಿನಲ್ಲಿ ಪುತ್ತೂರು ತಾಲೂಕಿಗೆ ಶೇ. 86.14 ಫಲಿತಾಂಶ ದಾಖಲಾಗಿತ್ತು.

ಸುಳ್ಯ ಎ. 30: ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ತಾಲೂ ಕಿನಲ್ಲಿ ಶೇ. 84.98 ಫಲಿತಾಂಶ ದಾಖಲಾ ಗಿದೆ. ಕಳೆದ ವರ್ಷಕ್ಕಿಂತ ಶೇ. 0.38ರಷ್ಟು ಏರಿಕೆ ಕಂಡಿದೆ.

ತಾಲೂಕಿನ 38 ಪ್ರೌಢ ಶಾಲೆಗಳ 1,864 ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದರು. 929 ಬಾಲಕರ ಪೈಕಿ 768 ಮಂದಿ, 935 ಬಾಲಕಿಯರ ಪೈಕಿ 816 ಮಂದಿ ಉತ್ತೀರ್ಣರಾಗಿದ್ದಾರೆ. 161 ಬಾಲಕರು ಹಾಗೂ 119 ಬಾಲಕಿಯರು ಅನುತ್ತೀರ್ಣಗೊಂಡಿದ್ದಾರೆ.

6 ಶಾಲೆಗಳಿಗೆ ಶೇ. 100
ತಾಲೂಕಿನ 6 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ. ಸರಕಾರಿ ಶಾಲೆ ಗಳ ಪೈಕಿ ಪಂಜ ಮೊರಾರ್ಜಿ ಪ್ರೌಢಶಾಲೆ, ಖಾಸಗಿ ಶಾಲೆಗಳಾದ ರೋಟರಿ ಪ್ರೌಢಶಾಲೆ, ಸ್ನೇಹ ಶಿಕ್ಷಣ ಸಂಸ್ಥೆ, ಎಲಿಮಲೆ ಜ್ಞಾನದೀಪ ಪ್ರೌಢಶಾಲೆ, ಸುಬ್ರಹ್ಮಣ್ಯ ಕುಮಾರಸ್ವಾಮಿ ಪ್ರೌಢಶಾಲೆ, ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್‌ ಶಾಲೆ ಶೇ. 100 ಫಲಿತಾಂಶ ಪಡೆದಿವೆ. ಶೇ. 90ರಷ್ಟು ಪ್ರೌಢಶಾಲೆಗಳು ಶೇ. 60ಕ್ಕೂ ಅಧಿಕ ಫಲಿತಾಂಶ ದಾಖಲಿಸಿವೆ. ಅಜ್ಜಾವರ ಸರಕಾರಿ ಪ್ರೌಢಶಾಲೆ ಅತಿ ಕಡಿಮೆ (ಶೇ. 48) ಫಲಿತಾಂಶ ದಾಖಲಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಅವರು ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

Advertisement

ಮೇಘಾಲಯ ವಿದ್ಯಾರ್ಥಿಗೆ ಕನ್ನಡದಲ್ಲಿ 70 ಅಂಕ!
ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಮೇಘಾಲಯದ ಶಿಲಾಂಗ್‌ ನಿವಾಸಿ ತುಬರ್‌ ನಾರ್‌ ಲಿಂಕೋಯ್‌ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದು, ಕನ್ನಡ ಭಾಷೆಯಲ್ಲಿ 70 ಅಂಕ ಗಳಿಸಿದ್ದಾನೆ. ಮೇಘಾಲಯದಿಂದ ಬಂದು ಕಳೆದ ವರ್ಷ 9ನೇ ತರಗತಿಗೆ ಸೇರಿ ಕನ್ನಡ ಕಾಗುಣಿತ ಅಭ್ಯಾಸ ನಡೆಸಿದ್ದ ಈತ ಒಟ್ಟು 325 ಅಂಕ ಪಡೆದು ಉತ್ತೀರ್ಣನಾಗಿದ್ದಾನೆ. ಪ್ರಸ್ತುತ ಅಡ್ಕಾರಿನ ವನವಾಸಿ ವಿದ್ಯಾರ್ಥಿ ನಿಲಯದಲ್ಲಿರುವ ಈತ ಮೇಘಾಲಯದ ಶಿಪ್‌ ಸ್ಯಾಂಗ್ರಿಯಾನ್‌ ಮತ್ತು ಸ್ಪಿಮ್‌ ಲಿಂಕೋಯ್‌ ದಂಪತಿಯ ಪುತ್ರ.

ರಾಜ್ಯಕ್ಕೆ ದ್ವಿತೀಯ
ತೆಂಕಿಲ ವಿವೇಕಾನಂದ ಆಂ.ಮಾ. ಶಾಲೆಯ ಸಿಂಚನಲಕ್ಷ್ಮೀ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯವರ ಪ್ರಕಟನೆ ತಿಳಿಸಿದೆ.

ತುಳು ಪಠ್ಯ: ಶೇ. 100
ಈ ಬಾರಿ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಪರೀಕ್ಷಾ ಕೇಂದ್ರದಲ್ಲಿ ತೃತೀಯ ಭಾಷೆಯನ್ನಾಗಿ ಆಯ್ದುಕೊಂಡಿರುವ 56 ವಿದ್ಯಾರ್ಥಿಗಳು ತುಳು ಪಠ್ಯದಲ್ಲಿ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next