ನಗರವಂತೂ ತಳಿರು ತೋರಣ, ಮಹಾದ್ವಾರ, ದೇವರ ಕಟೌಟ್‌ಗಳು, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಳ್ಳುತ್ತಿದೆ. ನಗರವನ್ನು ಪ್ರವೇಶಿಸುವ ವಿವಿಧ ಕಡೆಗಳಲ್ಲಿ ಹಾಗೂ ದೇವರು ಸವಾರಿ ತೆರಳುವ ಕಡೆಗಳಲ್ಲಿ ಭಕ್ತರು ಅಳವಡಿಸಿರುವ ಸ್ವಾಗತ ಕಮಾನುಗಳು ಜಾತ್ರೆಯ ಮೆರುಗನ್ನು ಹೆಚ್ಚಿಸಿವೆ.
Advertisement
ಜಾತ್ರೆಯ ಸಂದರ್ಭದಲ್ಲಿ ಎ. 10ರಿಂದ ಎ.18ರ ವರೆಗೆ ರಾತ್ರಿ ಶ್ರೀ ದೇವರ ಪೇಟೆ ಸವಾರಿ ನಡೆಯುತ್ತದೆ. ಎ. 16ರಂದು ಮಾತ್ರ ದೇವರ ಪೇಟೆ ಸವಾರಿ ನಡೆಯುವುದಿಲ್ಲ.
ಶ್ರೀ ದೇವರ ಪೇಟೆ ಸವಾರಿ ನೆಲ್ಲಿಕಟ್ಟೆ, ಸಾಲ್ಮರ, ಸೂತ್ರ ಬೆಟ್ಟು, ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು ಏಳ್ನಾಡುಗುತ್ತು, ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರ, ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳು ವಾರುಬೈಲು, ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್ ಸವಾರಿ, ಬನ್ನೂರು, ಅಶೋಕನಗರ, ರೈಲ್ವೇ ಮಾರ್ಗ ಸವಾರಿ, ಬಂಗಾರ್ ಕಾಯರ್‌ಕಟ್ಟೆ ಸವಾರಿ ನಡೆಯುತ್ತದೆ.
Related Articles
ಜಾತ್ರಾ ಗದ್ದೆಯಲ್ಲಿ ಸಂತೆ ಮಾರುಕಟ್ಟೆ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಈ ಮಧ್ಯೆ ನಗರದಲ್ಲಿ ಜನಜಂಗುಳಿಯೂ ಹೆಚ್ಚಾಗಿದೆ. ಮಾಮೂಲಾಗಿ ಸಂಜೆ ಸಮಯದಲ್ಲಿ ನಗರದಲ್ಲಿ ಒಂದಷ್ಟು ಜನಸಂದಣಿ ಕಡಿಮೆಯಾದರೆ ಜಾತ್ರೆಯ ಸಂದರ್ಭದಲ್ಲಿ ದೇವರ ಪೇಟೆ ಸವಾರಿ ನಡೆಯುವುದರಿಂದ ತಡರಾತ್ರಿಯವರೆಗೂ ಜನಸಂದಣಿ ಕಂಡುಬರುತ್ತದೆ. ದೂರದೂರುಗಳಿಂದಲೂ ಭಕ್ತರು ಪೇಟೆ ಸವಾರಿಯನ್ನು ನೋಡಲು ಆಗಮಿಸುತ್ತಿದ್ದಾರೆ.
Advertisement
ಆಕರ್ಷಕ ಸ್ವಾಗತದೇವರ ಪೇಟೆ ಸವಾರಿಯ ಸಂದರ್ಭದಲ್ಲಿ ದೇವರನ್ನು ಸ್ವಾಗತಿಸುವ ಆಕರ್ಷಕ ಕಮಾನುಗಳು ನಗರದೆಲ್ಲೆಡೆ ಕಂಡುಬರುತ್ತಿದೆ. ಸೀಮೆಯ ಜನತೆ ಪುತ್ತೂರು ಜಾತ್ರೆ ಉತ್ಸವದ ಸಂಭ್ರಮವನ್ನು ಅನುಭವಿಸುತ್ತಾರೆ. ಶ್ರೀ ದೇವರ ಪೇಟೆ ಸವಾರಿ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳು, ವ್ಯಾಪಾರಸ್ಥರು, ಮನೆಗಳನ್ನು ಹೊಂದಿರುವವರು ಎಲ್ಲಿಗೂ ತೆರಳದೆ ಶ್ರೀ ದೇವರ ಪೇಟೆ ಸವಾರಿ ದರ್ಶನಕ್ಕೆ ಕಾಯುತ್ತಾರೆ. ಶ್ರೀ ದೇವರ ಬಲಿ ಉತ್ಸವ
ಪುತ್ತೂರು: ಶ್ರೀ ಮಹಾಲಿಂಗೇ ಶ್ವರ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಬುಧ ವಾರ ಬೆಳಗ್ಗೆ ಶ್ರೀ ದೇವರ ಬಲಿ ಉತ್ಸವ ಬೆಂಡೆ ಮೇಳದೊಂದಿಗೆ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಉತ್ಸವ ನಡೆದು ಬಳಿಕ ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು, ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರವಾಗಿ ಶ್ರೀ ದೇವರ ಪೇಟೆ ಸವಾರಿ ತೆರಳಿ ಕಟ್ಟೆ ಪೂಜೆಗಳನ್ನು ಸ್ವೀಕರಿಸಿ ರಾತ್ರಿ ದೇವಸ್ಥಾನಕ್ಕೆ ಮರಳಿತು. ಇಂದಿನ ಪೇಟೆ ಸವಾರಿ
ಎ. 13ರಂದು ಮೇಷ ಸಂಕ್ರಮಣದ ದಿನ ಬೆಳಗ್ಗೆ ದೇವಸ್ಥಾನದಲ್ಲಿ ಶ್ರೀ ದೇವರ ಉತ್ಸವ ಬಲಿ, ರಾತ್ರಿ ಉತ್ಸವ ನಡೆಯಲಿದೆ. ಬಳಿಕ ಶ್ರೀ ದೇವರ ಪೇಟೆ ಸವಾರಿಯು ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳುವಾರುಬೈಲುಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ರಾತ್ರಿ ದೇವಸ್ಥಾನಕ್ಕೆ ಹಿಂದಿರುಗಲಿದೆ. ನಗರದ ಮಹಮ್ಮಾಯಿ ದೇವಸ್ಥಾನ ರಸ್ತೆಯಲ್ಲಿ ಅಳವಡಿಸಿರುವ ಆಕರ್ಷಕ ಸ್ವಾಗತ ಕಮಾನು.