Advertisement

ನರಿಮೊಗರು ಪ್ರಾಥಮಿಕ ಶಾಲೆಗೆ ಶತಮಾನೋತ್ಸವ ಸಡಗರ 

06:05 AM Feb 22, 2019 | Team Udayavani |

ನರಿಮೊಗರು: ಖಾಸಗಿ ಶಾಲೆಗಳ ಪೈಪೋಟಿ, ಸರಕಾರಿ ಶಾಲೆ ಬಗೆಗಿನ ಹೆತ್ತವರ ನಿರಾಸಕ್ತಿ ಇವೆರಡರ ನಡುವೆ ಗುಣಾತ್ಮಕ ಶಿಕ್ಷಣ ಮತ್ತು ಶಾಲಾ ಶಿಕ್ಷಣಕ್ಕೆ ಪ್ರೇರಣೆ ನೀಡುವಂತೆ ಬೆಳೆದು ನಿಂತಿದೆ ಗ್ರಾಮೀಣ ಭಾಗದಲ್ಲಿರುವ ಈ ಸರಕಾರಿ ಕನ್ನಡ ಮಾಧ್ಯಮ ಶಾಲೆ.

Advertisement

ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ನರಿಮೊಗರು ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ‌ ಶತ ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.

1919ರಲ್ಲಿ ಪ್ರಾರಂಭ
ಶತ ಸಂಭ್ರಮವನ್ನು ಆಚರಿಸುತ್ತಿರುವ ಈ ವಿದ್ಯಾದೇಗುಲವನ್ನು 1919ರಲ್ಲಿ ಊರಿಗೊಂದು ಶಾಲೆಯಾಗಬೇಕು, ಜನರಿಗೆ ಪ್ರಾಥಮಿಕ ಮೂಲ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ದಿ| ಅನಂತ್‌ನಾಯಕ್‌ ಯಾನೆ ದಾಮು ಮಾಸ್ತರ್‌ ಶಾಲೆಯನ್ನು ಊರ ಹಿರಿಯರಾದ ಅನಂತಯ್ಯ ಶೆಟ್ಟಿಯವರ ಚಾವಡಿಯಲ್ಲಿ ಪ್ರಾರಂಭ ಮಾಡಿದರು. ನಾಲ್ಕು ತಲೆಮಾರಿಗೆ ಸಾವಿರಾರು ಎಳೆಯ ಮನಸ್ಸುಗಳಿಗೆ ವಿದ್ಯಾರ್ಜನೆ ನೀಡಿ ನಮ್ಮ ಸಮಾಜದ ಸತøಜೆಗಳನ್ನಾಗಿ ರೂಪಿಸಿದ ಹೆಗ್ಗಳಿಕೆ ಈ ಶಾಲೆಗಿದೆ.

ಶಾಲೆಯಲ್ಲಿ ಮೂಲಸೌಕರ್ಯಗಳಾದ ಶೌಚಾಲಯ, ತರಗತಿ ಕೊಠಡಿಗಳು, ಅಕ್ಷರ ದಾಸೋಹ, ವಿಶಾಲವಾದ ಮೈದಾನ ಇತ್ಯಾದಿಗಳಿದ್ದು, 200 ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುತ್ತಿದ್ದಾರೆ. 8 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಶಾಲಾ ಅಭಿವೃದ್ಧಿ ಸಮಿತಿ ಶಾಲೆಯ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದೆ.

ಶಾಲೆಯಲ್ಲಿ ಕಲಿತ ಸಾಧಕರು
ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ, ಮಕ್ಕಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದರೆ ಮಾತ್ರವೇ ಬುದ್ಧಿವಂತರಾಗುತ್ತಾರೆ ಎಂಬ ಮನಃಸ್ಥಿತಿ ಮತ್ತು ತಪ್ಪು ಕಲ್ಪನೆ ಹೆತ್ತವರಲ್ಲಿ ಇರುವುದರಿಂದ ಸರಕಾರಿ ಶಾಲೆಗಳು ಬೀಗ ಜಡಿಯುವ ಪರಿಸ್ಥಿತಿ ಉಂಟಾಗಿದೆ. ಇಂತಹ ಮನಸ್ಥಿತಿ ಹೋಗಲಾಡಿಸುವ ಮತ್ತು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ಮಾಡಬಹುದು ಎಂಬ ಮಾತಿಗೆ ಉದಾಹರಣೆ-ಈ ಶಾಲೆಯಲ್ಲಿ ಕಲಿತು ರಾಜಕೀಯ ಕ್ಷೇತ್ರ, ಸಾಮಾಜಿಕ, ಕಲಾರಾಧನೆ, ಯೋಧರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಿದ್ಯಾರ್ಥಿಗಳು. ನಾನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವುದು ಕಲಿತ ಶಾಲೆಗೆ ಹೆಗ್ಗಳಿಕೆ ತಂದಿದೆ.

Advertisement

ಗ್ರಾಮೀಣ ಶಾಲೆಗೆ ಪಟ್ಟಣದ ಕಳೆ
ಒಂದು ಅವಧಿಯಲ್ಲಿ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದ ಶಾಲೆ ಪೈಪೋಟಿಗಳ ನಡುವೆ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ಶತಮಾನದ ಗತ ವೈಭವಕ್ಕೆ ಮರಳಿಸುವ ಪ್ರಯತ್ನ ಈ ಹಳ್ಳಿ ಶಾಲೆಯಲ್ಲಿ ನಡೆಯುತ್ತಿದೆ. ಶತಮಾನೋತ್ಸವ ಸಂಭ್ರಮದಲ್ಲಿರುವ ಶಾಲೆಯಲ್ಲಿ ಹಲವಾರು ಶಾಶ್ವತ ಯೋಜನೆಗಳನ್ನು ಹಮ್ಮಿಕೊಂಡು ಮಾದರಿ ಶಾಲೆಯಾಗಿ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 60 ಅಡಿ ಅಗಲ ಮತ್ತು 120 ಅಡಿ ಉದ್ದದ ಆಡಿಟೋರಿಯಮ್‌ ನಿರ್ಮಾಣ ಮಾಡಲಾಗಿದ್ದು, ಇಂಟರ್‌ ಲಾಕ್‌ ಅಳವಡಿಸಲಾಗಿದೆ. ಇಂತಹ ಆಡಿಟೋರಿಯಮ್‌ ಬೇರೆ ಸರಕಾರಿ ಶಾಲೆಗಳಲ್ಲಿ ಕಾಣಸಿಗದು.

ಇದರೊಂದಿಗೆ 3.5 ಎಕರೆ ಜಾಗಕ್ಕೆ ಆವರಣ ಗೋಡೆ, ಕಾಂಕ್ರೀಟ್‌ ರಸ್ತೆ, ಕಂಪ್ಯೂಟರ್‌ ಸೌಲಭ್ಯ, ಮಕ್ಕಳಲ್ಲಿ ಪರಿಸರ ಸ್ನೇಹಿ ವಾತಾವರಣ ಕಲ್ಪಿಸಲು ಉದ್ಯಾನವನ, ಕೈತೋಟ ನಿರ್ಮಾಣ ಮಾಡಲಾಗಿದೆ. ಶಾಲಾ ಶತಮಾನೋತ್ಸವ ಸಂಭ್ರಮವು ಫೆ. 23 ಮತ್ತು 24ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಶಾಶ್ವತ ಯೋಜನೆಗೆ ಪ್ರಯತ್ನ
ಆಂಗ್ಲಭಾಷಾ ವ್ಯಾಮೋಹದಿಂದ ಕನ್ನಡ ಶಾಲೆಗಳು ಮುಚ್ಚುತ್ತಿರುವ ಎಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಈ ಸಂದರ್ಭ ಕನ್ನಡ ಭಾಷೆ ಮತ್ತು ಕನ್ನಡ ಶಾಲೆಯನ್ನು ಉಳಿಸುವ, ಬೆಳೆಸುವ ಪ್ರಯತ್ನದ ಜತೆಗೆ ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಸಕಲ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ದಾನಿಗಳ, ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶತಮಾನದ ನೆನಪಿನಲ್ಲಿ ಉಳಿಯುವಂತೆ ಶಾಶ್ವತ ಯೋಜನೆ ಮತ್ತು ವಿದ್ಯಾರ್ಥಿಗಳ ಸಂಖ್ಯೆಯನ್ನು ವೃದ್ಧಿಸಲು ಸಣ್ಣ ಪ್ರಯತ್ನ ನಡೆಯುತ್ತಿದೆ.
ಅರುಣ್‌ ಕುಮಾರ್‌ ಪುತ್ತಿಲ
ಅಧ್ಯಕ್ಷರು, ಶತಮಾನೋತ್ಸವ ಸಮಿತಿ

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next