Advertisement

ಪುತ್ತೂರು: ಸೋಮವಾರ ಜನಸಂದಣಿ

11:11 PM May 11, 2020 | Sriram |

ಪುತ್ತೂರು: ಲಾಕ್‌ಡೌನ್‌ ಸಡಿಲಿಕೆ ಬಳಿಕ ವಾರದ ಪ್ರಥಮ ದಿನ ಸೋಮವಾರ ನಗರದಲ್ಲಿ ವಾಹನ, ಜನರ ಓಡಾಟ ಅಧಿಕ ಕಂಡು ಬಂತು.

Advertisement

ಲಾಕ್‌ಡೌನ್‌ ಆರಂಭವಾದ ಬಳಿಕ ವಾರದ ಸಂತೆ ಸ್ಥಗಿತ ಗೊಂಡಿದೆ. ಆದರೂ ವಿವಿಧ ಕಾರಣಗಳಿಗಾಗಿ ಈಗಲೂ ಸೋಮವಾರ ಜನ, ವಾಹನಗಳ ಸಂಚಾರ ಹೆಚ್ಚು ಕಂಡು ಬರುತ್ತಿದೆ. ನಗರದ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಂಭಾಗದಲ್ಲಿ ಕ್ಯೂ ಕಂಡುಬಂತು. ಪೊಲೀಸರು ಇಲ್ಲದಿರುವುದರಿಂದ ಸೋಮವಾರ ನಗರದ ಬ್ಯಾಂಕ್‌ ಒಂದರಲ್ಲಿ ಸಾಮಾಜಿಕ ಅಂತರವೂ ಪಾಲನೆ ಯಾಗಿರಲಿಲ್ಲ. ಪರಿಸ್ಥಿತಿ ವಿಕೋ ಪಕ್ಕೆ ಹೋಗುತ್ತಿರುವುದನ್ನು ಗಮ ನಿಸಿದ ಪೊಲೀಸರು ಆಗಮಿಸಿ ಎಚ್ಚರಿಕೆ ನೀಡಿದರು.

ಎಟಿಎಂಗಳು ಬಂದ್‌
ಸ್ಯಾನಿಟೈಸರ್‌ ಇಲ್ಲದೆ, ಸಾಮಾ ಜಿಕ ಅಂತರವೂ ಕಾಪಾಡಿಕೊಳ್ಳಲು ಸಾಧ್ಯವಾಗದೆ ಇರುವುದರಿಂದ ಬಹು ತೇಕ ಬ್ಯಾಂಕ್‌ಗಳು ಎಟಿಎಂಗೆ ಹಣ ಪೂರೈಕೆ ಮಾಡುತ್ತಿಲ್ಲ. ಹೀಗಾಗಿ ಖಾತೆಯಿಂದ ಹಣ ಹಿಂದೆಗೆಯಲೂ ಕ್ಯೂ ನಿಲ್ಲಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಸ್ವಯಂ ಬಂದ್‌ ತೀರ್ಮಾನ
ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ವ್ಯಾಪಾರಿಗಳು ಮಧ್ಯಾ ಹ್ನದ ತನಕ ಮಾತ್ರ ವ್ಯಾಪಾರ ನಡೆಸಲು ಮನಸ್ಸು ಮಾಡಿದ್ದಾರೆ. ನಗರದ ಹೆಚ್ಚಿನ ಕಡೆಗಳಲ್ಲಿ ಮಧ್ಯಾಹ್ನದ ಬಳಿಕ ಅಂಗಡಿ ಮುಚ್ಚಿ ರುವುದು ಕಂಡುಬಂತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next