Advertisement
ಸಂತಾನೋತ್ಪತ್ತಿಗಾಗಿ ಪಶ್ಚಿಮ ಆಫ್ರಿಕಾ ಮತ್ತು ಕೆಂಪು ಸಮುದ್ರದಿಂದ ಭಾರತದ ಕರಾವಳಿಗೆ ವಲಸೆ ಬರುವ ರೀಪ್ ಎಗ್ರೇಟ್ ಹಾಗೂ ಎಗ್ರೆಟಾ ಗುಲಾರಿಸ್ ಎಂಬ ಪ್ರಭೇದದ ಕೊಕ್ಕರೆ ಪುತ್ತೂರಿನ ಕೇಂದ್ರ ಸ್ಥಾನದಲ್ಲಿರುವ ಅಶ್ವತ್ಥ ಮರಕ್ಕೆ ವಲಸೆ ಬಂದಿದೆ.
ಕಳೆದ ಕೆಲವು ದಿನಗಳಿಂದ ಗಾಂಧಿಕಟ್ಟೆ, ಅಶ್ವತ್ಥಕಟ್ಟೆ ಅಭಿವೃದ್ದಿ ಕಾಮಗಾರಿ ನಡೆಯುತ್ತಿದ್ದು, ಅಶ್ವತ್ಥ ಮರದ ಬಾಗಿದ ಗೆಲ್ಲುಗಳನ್ನು ಕಡಿಯಲಾಗಿದೆ. ಹಗಲಲ್ಲಿ ಆಹಾರ ಅರಸುತ್ತಾ ತೆರಳುವ ವಲಸೆ ಕೊಕ್ಕರೆಗಳು ರಾತ್ರಿ ಯಾಗುತ್ತಿದ್ದಂತೆ ಇಲ್ಲಿಗೆ ಆಗಮಿಸುತ್ತದೆ. ಜತೆಗೆ ನೀರು ಕಾಗೆ, ಸ್ಥಳೀಯ ಕೊಕ್ಕರೆಗಳೂ ಆಶ್ರಯ ಪಡೆಯುತ್ತಿದೆ. ಬಾವಲಿಗಳೂ ಇವೆ. ರಾತ್ರಿಯಾಗುತ್ತಿದ್ದಂತೆ ಉರಿಯುವ ದೀಪದಂತೆ ಕೊಕ್ಕರೆಗಳು ಮರದಲ್ಲಿ ಕಾಣಿಸುತ್ತವೆ. ಹಕ್ಕಿಗಳ ಕಲರವ ಕಿರಣ್ ಶಂಕರ್ ಮಲ್ಯ ಬೊಳುವಾರು ಕೆಮರಾ ಕಣ್ಣಲ್ಲಿ ಸೆರೆಯಾಗಿದೆ.