Advertisement

ಹಸುವಿನ ಸೆಗಣಿ ಬಳಸಿ ‘ಗೋ ರಂಗ್‌’ತಯಾರಿ

05:53 AM Jan 20, 2019 | |

ನಿಡ್ಪಳ್ಳಿ : ಪುತ್ತೂರು ತಾಲೂಕು ಇರ್ದೆ ಗ್ರಾಮದ ಬೆಂದ್ರ್ ತೀರ್ಥ ಸಮೀಪದ ದೇವಕಾನ ನಿವಾಸಿ ಪಂಚಗವ್ಯ ಸಿದ್ದ ವೈದ್ಯ ಡಾ| ಶಶಿಶೇಖರ ಭಟ್ ಅವರು ನಾಟಿ ಹಸುವಿನ ಸೆಗಣಿ ಬಳಸಿ ಮನೆಯ ಗೋಡೆಗೆ ಬಳಿಯುವ ಬಣ್ಣ ತಯಾರಿಸಿ ಯಶಸ್ವಿಯಾಗಿದ್ದಾರೆ.

Advertisement

ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಪದಾರ್ಥಗಳಿಂದ ಮಾಡಿದ ಬಣ್ಣಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ಮನಗಂಡ ಅವರು ಈ ನೂತನ ಉತ್ಪನ್ನವನ್ನು ತಯಾರಿಸಲು ಮುಂದಾಗಿ ಯಶಸ್ವಿಯಾಗಿದ್ದಾರೆ.

ಪಾರಂಪರಿಕ ತಣ್ತೀದ ಆಧಾರ
ಗೋ ಸಾಕಾಣಿಕಾ ಕೇಂದ್ರಿತ ಜೀವನದಿಂದ ಪ್ರೇರಿತರಾಗಿರುವ ಅವರು ಗವ್ಯ ಉತ್ಪನ್ನಗಳ ಸಂಶೋಧಕರಾಗಿದ್ದು, ಔಷಧ ನೀಡಿ ಅನೇಕ ರೋಗಿಗಳ ರೋಗವನ್ನು ವಾಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸೆಗಣಿ ನೀರಿನಲ್ಲಿ ಸೂರ್ಯಗ್ರಹಣ ವೀಕ್ಷಿಸಿದರೆ ನಮಗೆ ಸಮಸ್ಯೆ ಇಲ್ಲ ಎನ್ನುವ ಪಾರಂಪರಿಕ ತಣ್ತೀದ ಆಧಾರದ ಮೇಲೆ ಈ ಸಂಶೋಧನೆಗೆ ತೊಡಗಿದ್ದಾರೆ.

ಅಡ್ಡ ಪರಿಣಾಮವಿಲ್ಲ
ನಾವು ವಾಸಿಸುವ ಜಾಗವನ್ನು ರಾಸಾಯನಿಕ ಬಣ್ಣಗಳಿಂದ ಮುಕ್ತಗೊಳಿಸಿ ವಿಕಿರಣ ರಹಿತ ಮಾಡುವ ನಿಟ್ಟಿನಲ್ಲಿ ಗೋ ರಂಗ್‌ (ಬಣ್ಣ) ತಯಾರಿಸಿ ಮೊದಲು ತಮ್ಮದೇ ಮನೆಯ ಗೋಡೆಗೆ ಬಣ್ಣ ಬಳಿದಿದ್ದಾರೆ. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ, ಆಯುಷ್ಯ ಹಾಗೂ ಆರೋಗ್ಯವೂ ವೃದ್ಧಿಸುತ್ತದೆ ಎಂದು ಡಾ| ಶಶಿಶೇಖರ ಭಟ್ ಹೇಳುತ್ತಾರೆ.

ಉಷ್ಣಾಂಶ ತಡೆಯುವ ಶಕ್ತಿ
ಗವ್ಯ ಔಷಧ ಹಲವು ಮಾರಕ ಕಾಯಿಲೆಗಳನ್ನು ವಾಸಿ ಮಾಡುವಲ್ಲಿ ಪರಿಣಾಮಕಾರಿ ಎನ್ನುವ ಸಂಗತಿ ಈ ವಿನೂತನ ಆವಿಷ್ಕಾರಕ್ಕೆ ಪ್ರೇರಣೆಯಾಯಿತು. ಸೆಗಣಿ ಕಪ್ಪಾದರೂ ಇತರ ಕಪ್ಪು ವಸ್ತುಗಳಿಗೆ ಹೋಲಿಸಿದರೆ ಉಷ್ಣಾಂಶ ತಡೆಯುವ ಶಕ್ತಿ ಪಡೆದಿದೆ. ಜಾಗತಿಕ ತಾಪಮಾನ ಏರಿಕೆಗೆ ಆರ್‌ಸಿಸಿ ಮನೆಗಳು ಕಾರಣವಾಗಿದ್ದು, ಮೇಲ್ಛಾವಣಿಗೆ ಸೆಗಣಿ ಜತೆ ಸುಣ್ಣ ಹಾಗೂ ಬೆಲ್ಲ ಸೇರಿಸಿ ಲೇಪನ ಮಾಡುವುದರಿಂದ ಕಟ್ಟಡದ ಒಳಗೆ ಬಿಸಿ ತಗ್ಗಿಸಲು ಸಾಧ್ಯವಿದೆಯೇ ಎಂದು ಪ್ರಯೋಗ ಮಾಡಲು ತೊಡಗಿದ್ದೇನೆ ಎಂದು ಭಟ್ ಹೇಳಿದ್ದಾರೆ.

Advertisement

ವಿವಿಧ ಬಣ್ಣಗಳ ತಯಾರಿ
ಸದ್ಯ ಸೆಗಣಿಯಿಂದ ದ್ರವರೂಪದ ಕಡು ಹಸಿರು ಮತ್ತು ಹಸಿರು ಮಿಶ್ರಿತ ಹಳದಿ ಬಣ್ಣ ತಯಾರಿಸಲಾಗಿದೆ. ದ್ರವರೂಪದಲ್ಲಿ ವಿವಿಧ ಬಣ್ಣಗಳ ತಯಾರಿ ಕಷ್ಟವಾದುದ ರಿಂದ ಮುಂದೆ ಪುಡಿ ರೂಪದಲ್ಲಿ ವಿವಿಧ ಬಣ್ಣಗಳ ತಯಾರಿಸಲು ಯೋಜನೆ ಇದ್ದು, ಅಗತ್ಯವಾದ ಬಣ್ಣಗಳನ್ನು ಮಾಡಿಕೊಳ್ಳಬಹುದಾಗಿದೆ.

ವಿಷಮುಕ್ತ ಪರಿಸರ
ಸೆಗಣಿಯಲ್ಲಿ ಪೇಪರ್‌, ರಟ್ಟು ಮೊದಲಾದ ವಸ್ತುಗಳನ್ನು ತಯಾರಿಸುವುದನ್ನು ಗಮನಿಸಿ ‘ಗೋ ರಂಗ್‌’ ಸಿದ್ಧಪಡಿಸಲು ಮುಂದಾಗಿದೆ. ಇದನ್ನು ಬಳಿಯುವವರಿಗೂ ಅಡ್ಡ ಪರಿಣಾಮವಿಲ್ಲ. ವಿಷಮುಕ್ತ ಪರಿಸರ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ಈ ರೀತಿ ಸಗಣಿಯ ಉಪಯೋಗದಿಂದ ಗೋ ರಕ್ಷಣೆಯೂಆದೀತು ಎನ್ನುವ ವಿಶ್ವಾಸ ಇದೆ.
 ಡಾ| ಶಶಿಶೇಖರ, ಇರ್ದೆ,
 ಗವ್ಯ ಸಿದ್ದ ವೈದ್ಯರು

ಆರೋಗ್ಯ ಸಮಸ್ಯೆ ಬರೋದಿಲ್ಲ
ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಬಣ್ಣ ಬಳಿಯುವಾಗ ಕಣ್ಣು ಉರಿ ಮತ್ತು ಕೆಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಗೋ ರಂಗ್‌ ಬಳಿಯುವಾಗ ಕಣ್ಣುರಿ ಬರುವುದಿಲ್ಲ. ಖುಷಿ ಎನಿಸುತ್ತದೆ.
ಬಣ್ಣ ಬಳಿಯುವ ಕಾರ್ಮಿಕರು

•ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next