Advertisement
ಪುತ್ತೂರು ರಥೋತ್ಸವದಂದು ಪ್ರತೀ ಬಾರಿಯೂ ಸುಡುಮದ್ದು ಪ್ರದರ್ಶನ ನಡೆಸಲಾಗುತ್ತಿದೆ. ಇದು “ಪುತ್ತೂರು ಬೆಡಿ’ ಎಂದು ಪ್ರಸಿದ್ಧಿ ಪಡೆದಿದೆ. ಕುಂಬಳೆ, ಪಂಜ, ವಿಟ್ಲ, ಪುತ್ತೂರು ಸಹಿತ ಕರಾವಳಿಯ ಸೀಮೆ ದೇವಸ್ಥಾನಗಳ ಪೈಕಿ ಪುತ್ತೂರು ಸೀಮೆಯ ಅಧಿಪತಿಯ ಬೆಡಿಮದ್ದು ಪ್ರದರ್ಶನ ನೋಡಲೆಂದೇ ಲಕ್ಷಾಂತರ ಜನ ಸೇರಿದ್ದರು.
Related Articles
Advertisement
ಅಗ್ನಿಶಾಮಕ ದಳದ ವಾಹನ, ನಗರಭೆಯ ನೀರಿನ ಟ್ಯಾಂಕ್ ಸುರಕ್ಷತಾ ಕ್ರಮಗಳ ಅಂಗವಾಗಿ ಸಿದ್ಧವಾಗಿದ್ದವು. ಮರಳು ತುಂಬಿದ ಹತ್ತಾರು ಬಕೆಟ್‌ಗಳನ್ನೂ ಇಡಲಾಗಿತ್ತು. ಸುಡುಮದ್ದು ಪ್ರದರ್ಶನ ಅಂತ್ಯಗೊಂಡ ಬಳಿಕ ಪರಿಸರಕ್ಕೆ ಅಗ್ನಿಶಾಮಕ ದಳದ ವತಿಯಿಂದ ನೀರು ಹಾಯಿಸಲಾಯಿತು.
ಪುತ್ತೂರ ಉಳ್ಳಾಯನಿಗೆ ಬಟ್ಟಲು ಕಾಣಿಕೆ ಸಮರ್ಪಣೆನಗರ: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಬುಧವಾರ ಬ್ರಹ್ಮರಥೋತ್ಸವದ ಪೂರ್ವಭಾವಿಯಾಗಿ ಬೆಳಗ್ಗೆ ನಡೆದ ಶ್ರೀ ದೇವರ ದರ್ಶನ ಬಲಿ ಮತ್ತು ಬಟ್ಟಲು ಕಾಣಿಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತ ಜನಸ್ತೋಮ ಪಾಲ್ಗೊಂಡರು. ಬಲ್ನಾಡಿನಿಂದ ಮಂಗಳವಾರ ರಾತ್ರಿ ಶ್ರೀ ದೇಗುಲಕ್ಕೆ ಆಗಮಿಸಿದ ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಜತೆ ಮೂರು ಸುತ್ತಿನ ದರ್ಶನ ಬಲಿಯು ಉತ್ಸವದ ಕೊನೆಯ ಭಾಗದಲ್ಲಿ ನಡೆಯಿತು. ಒಂದೇ ಅವಕಾಶ
ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೆಯ ಸಂದರ್ಭ ಎ. 10ರಿಂದ 19ರ ತನಕ ಪೇಟೆ ಸವಾರಿ ಮತ್ತು ಶ್ರೀ ದೇವರ ಉತ್ಸವ ಬಲಿ ನಡೆಯುತ್ತದೆಯಾದರೂ ಸೀಮೆಯ ಭಕ್ತರಿಗೆ ಬಟ್ಟಲು ಕಾಣಿಕೆ ಸಮರ್ಪಿಸಲು ಎ. 17ರಂದು ನಡೆಯುವ ದರ್ಶನ ಬಲಿಯ ಸಂದರ್ಭ ಮಾತ್ರ ಅವಕಾಶವಿರುತ್ತದೆ. ಮಹಾ ಅನ್ನದಾನ
ಬುಧವಾರ ಮಧ್ಯಾಹ್ನ ಬ್ರಹ್ಮರಥೋತ್ಸವದ ಅನ್ನಸಂತರ್ಪಣೆಯಲ್ಲಿ 25 ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಬ್ರಹ್ಮರಥೋತ್ಸವದ ಪ್ರಯುಕ್ತ ಅಂಗಡಿ ಮುಂಗಟ್ಟುಗಳಿಗೆ ರಜೆಯ ಹಿನ್ನೆಲೆಯಲ್ಲಿ ಭಕ್ತರ ಸಂದಣಿ ಹೆಚ್ಚಿತ್ತು. ದರ್ಶನ ಬಲಿ ಉತ್ಸವದಲ್ಲಿ ಪಾಲ್ಗೊಂಡು ಬಟ್ಟಲು ಕಾಣಿಕೆ ಸಲ್ಲಿಸಿದ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ದೇವಾಲಯದ ಹೊರಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭಕ್ತರ ಬಾಯಾರಿಕೆ ನೀಗಿಸುವ ನಿಟ್ಟಿನಲ್ಲಿ ಪಾನಕ, ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು. ಶೋಭಾ ಭೇಟಿ, ಬಾರದ ಡಿ.ವಿ.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಪ್ರತಿ ವರ್ಷ ಪುತ್ತೂರು ಜಾತ್ರೆಯ ರಥೋತ್ಸವದ ದಿನ ದೇವಾಲಯಕ್ಕೆ ಭೇಟಿ ನೀಟಿ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದರು. ಆದರೆ ಈ ಬಾರಿ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ಪ್ರಚಾರದ ಕಾರಣ ಭೇಟಿ ನೀಡಿಲ್ಲ. ಆದರೆ ಚಾರ್ವಾಕದವರಾದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಂಗಳವಾರ ರಾತ್ರಿ ದೇವಾಲಯಕ್ಕೆ ಭೇಟಿ ನೀಡಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಬಟ್ಟಲು ಕಾಣಿಕೆ ವಿಶೇಷ
ಶ್ರೀ ಉಳ್ಳಾಳ್ತಿ ದೈವವು ದೇವಾಲಯದ ಧ್ವಜಸ್ತಂಭದ ಬಲ ಭಾಗದಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯ ಮುಂದೆ ಇರಿಸಲಾದ ಹರಿವಾಣಕ್ಕೆ ಕಡ್ತಲೆ ಸ್ಪರ್ಶಿಸುವ ಮೂಲಕ ಬಟ್ಟಲು ಕಾಣಿಕೆ ಸ್ವೀಕಾರಕ್ಕೆ ಅನುವು ಮಾಡಿಕೊಟ್ಟಿತು. ಬಟ್ಟಲು ಕಾಣಿಕೆ ಹಾಕಿದ ಭಕ್ತರಿಗೆ ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೊತ್ತ ಬ್ರಹ್ಮವಾಹಕರು ಶ್ರೀಗಂಧ ಪ್ರಸಾದವನ್ನು ನೀಡಿದರು.