Advertisement
ಬೆಳಗ್ಗೆ ಹಾಗೂ ಸಂಜೆ ಶ್ರೀ ದೇವರ ಬಲಿ ಉತ್ಸವ, ವಸಂತಕಟ್ಟೆಪೂಜೆ ನಡೆಯಿತು. ದೇವಾಲಯದ ಕಾರ್ಯನಿರ್ವಹ ಣಾಧಿಕಾರಿ, ಆಡಳಿತಾಧಿಕಾರಿ ಹಾಗೂ ನಿತ್ಯ ಕರಸೇವಕರು ಸೇರಿದಂತೆ ಸೀಮಿತ ಮಂದಿ ಪಾಲ್ಗೊಂಡರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ಗುರು ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಥೋತ್ಸವ ಇರಲಿಲ್ಲ.
ದೇವಾಲಯದ ವತಿಯಿಂದ ಭಕ್ತರಲ್ಲಿ ಮಾಡಿದ ವಿನಂತಿಯಂತೆ ಬ್ರಹ್ಮರಥೋತ್ಸವ ನಡೆಯುವ ರಾತ್ರಿ 7.30ರ ಬಳಿಕ
ಸೀಮೆಯ ಭಕ್ತರು ಮನೆಗಳಲ್ಲಿ ದೀಪ ಬೆಳಗಿಸಿ ಓಂ ನಮಃ ಶಿವಾಯ ಪಂಚಾಕ್ಷರಿ ಪಠಣವನ್ನು ಮಾಡುವ ಮೂಲಕ ಶ್ರೀ ಮಹಾಲಿಂಗೇಶ್ವರನನ್ನು ಭಕ್ತರು ಸ್ಮರಣೆ ಮಾಡಿ ದರು. ಈಗ ಬಂದಿರುವ ಕಷ್ಟ ಕಾರ್ಪ ಣ್ಯಗಳನ್ನು ದೂರೀಕರಿಸುವಂತೆ ಒಡೆಯನಿಗೆ ಪ್ರಾರ್ಥನೆ ಸಲ್ಲಿಸಿದರು. ಬಲಾ°ಡಿನಲ್ಲಿ ಪ್ರಾರ್ಥನೆ
ಕೆರೆಯ ಆಯನದ ದಿನವಾದ ಎ. 16ರಂದು ದೇವಾಲಯಕ್ಕೆ ನೇರ ಸಂಬಂಧವಿರುವ ಬಲಾ°ಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ಕಿರುವಾಳು ಆಗಮನಕ್ಕೆ ಲಾಕ್‌ಡೌನ್ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಕುಂಟಾರು ಗುರುಪ್ರಸಾದ್ ತಂತ್ರಿಯವರ ನೇತೃತ್ವದಲ್ಲಿ ಸಂಜೆ ಅಲ್ಲಿಗೆ ಭೇಟಿ ನೀಡ ಲಾಯಿತು.
Related Articles
Advertisement
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ದೇಗುಲದ ಆಡಳಿತಾಧಿಕಾರಿ ಲೋಕೇಶ್ ಸಿ., ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ವಾಸ್ತು ಎಂಜಿನಿಯರ್ ಪಿ. ಜಿಜಗನ್ನಿವಾಸ್ ರಾವ್, ಬ್ರಹ್ಮವಾಹಕ ಕೆ. ಪ್ರೀತಂ ಪುತ್ತೂರಾಯ, ಬಲಾ°ಡು ದೈವಸ್ಥಾನಕ್ಕೆ ಸಂಬಂಧಿಸಿ ಕಟ್ಟೆ ಮನೆ ಪ್ರತಿನಿಧಿ ದಂಡನಾಯಕನ ಪಾತ್ರಿ ಪರಮೇಶ್ವರ ಗೌಡ ಮತ್ತು ಅರ್ಚಕ ರವಿ ನೆಲ್ಲಿತ್ತಾಯ ಉಪಸ್ಥಿತರಿದ್ದರು.
ಅವಭೃಥಕ್ಕೆ ತೆರೆದ ಕೆರೆಯಲ್ಲಿ ತುಂಬಿದ ನೀರು!ಬ್ರಹ್ಮರಥೋತ್ಸವದ ಮರುದಿನ ದೇವರ ಅವಭೃಥ ಸ್ನಾನಕ್ಕೆಂದು ಸುಮಾರು 13 ಕಿ.ಮೀ. ದೂರದ ವೀರಮಂಗಲಕ್ಕೆ ದೇವರು ತೆರಳುವುದು ವಾಡಿಕೆ. ಆದರೆ ಈ ಬಾರಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಗುಲದ ಎದುರು ಗದ್ದೆಯಲ್ಲಿ ತಾತ್ಕಾಲಿಕವಾಗಿ ದೇವರ ಅವಭೃಥ ಸ್ನಾನಕ್ಕೆಂದು ಕೆರೆಯನ್ನು ತೋಡಲಾಗಿದೆ. ಈಗ ನಗರ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೇ ಇರುವ ಪರಿಸ್ಥಿತಿ ಇದೆ.
ಆದರೆ ಒಡೆಯನ ಅವಭೃಥಕ್ಕೆ ಮೇಲ್ಭಾಗದಲ್ಲೇ ನೀರು ಸಿಕ್ಕಿದೆ. ದೇವಸ್ಥಾನದ ಕೆರೆಯಲ್ಲಿ ವರ್ಷ ಪೂರ್ತಿ ನೀರು ಇರುತ್ತದೆ.
ಈ ಕೆರೆಯಿಂದ 100 ಮೀ. ದೂರದಲ್ಲಿರುವ ದೇಗುಲದ ಮುಂಭಾಗದ ಗದ್ದೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಗುಡಿ ಬಳಿ ಹಿಟಾಚಿ ಯಂತ್ರದ ಮೂಲಕ ತೆರೆದ ತಾತ್ಕಾಲಿಕ ಕೆರೆಯಲ್ಲಿ ಈ ಬೇಸಗೆಯಲ್ಲೂ ಕೇವಲ 8 ಅಡಿ ಆಳದಲ್ಲಿ ನೀರಿನ ಒರತೆ ಸಿಕ್ಕಿದೆ. ಇಂದು ಅವಭೃಥ
ಶ್ರೀ ಮಹಾಲಿಂಗೇಶ್ವರ ದೇವರ ಜಳಕದ ಸವಾರಿಯು ಎ. 18ರಂದು ದೇವಾಲಯದ ಎದುರು ತೆಗೆದ ಕೆರೆಯ ಬಳಿಗೆ ಸಾಗಲಿದ್ದು, ದೇವರ ಅವಭೃಥ ಸ್ನಾನದ ಬಳಿಕ ಧ್ವಜಾವರೋಹಣ ನಡೆಯಲಿದೆ. ಈ ಪ್ರಕ್ರಿಯೆಗಳು ಎ. 18ರಂದೇ ಮುಕ್ತಾಯಗೊಳ್ಳಲಿವೆ ಎಂಬ ಮಾಹಿತಿ ಲಭ್ಯವಾಗಿದೆ.