Advertisement
ಪುತ್ತೂರು ವ್ಯಾಪ್ತಿಯಲ್ಲಿ ಈ ಬಾರಿ ಬಿಸಿಲಿನ ತಾಪ ಹೆಚ್ಚಿದೆ. ಕಳೆದ ಬಾರಿ ಯುಗಾದಿಯ ಸಂದರ್ಭ ಅಂದರೆ ಮಾರ್ಚ್ ಮಧ್ಯಭಾಗದಲ್ಲಿ ಆರಂಭಗೊಂಡ ಮಳೆ ವಾರಕ್ಕೆ ಒಂದೆರಡರಂತೆ ನಿರಂತರ ವಾಗಿ ಸುರಿದಿತ್ತು. ಈ ಕಾರಣದಿಂದ ನೀರಿಗೆ ಸಂಬಂಧಿಸಿದ ಸಮಸ್ಯೆಯೂ ಕಡಿಮೆಯಾ ಗಿತ್ತು. ಆದರೆ ಈ ಬಾರಿ ಒಂದೆರಡು ಸಣ್ಣ ಪ್ರಮಾಣದ ಮಳೆ ಮಾತ್ರ ಸುರಿದಿದೆ.
Related Articles
ಶ್ರೀ ಮಹಾಲಿಂಗೇಶ್ವರ ದೇವರ ಸತ್ಯ -ಧರ್ಮ ನಡೆಯಲ್ಲಿ ಮಾಡಿದ ಪ್ರಾರ್ಥನೆಗೆ ದೇವರು ಫಲ ನೀಡದೆ ಇರುವುದಿಲ್ಲ ಎನ್ನುವ ಅಚಲವಾದ ನಂಬಿಕೆ ಜನರಲ್ಲಿದೆ. ಪ್ರತಿ ವರ್ಷ ಪುತ್ತೂರಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಎಳನೀರಿನ ಅಭಿಷೇಕವನ್ನು ಮಾಡಲಾಗುತ್ತದೆ. ಎಳನೀರಿನ ಅಭಿಷೇಕದ ಪ್ರತಿಫಲವಾಗಿ ವರುಣನ ಕೃಪೆಯಾಗುತ್ತದೆ. ಮಳೆ ಬಂದೇ ಬರುತ್ತದೆ ಎನ್ನುವುದು ಭಕ್ತರ ನಂಬಿಕೆ. ಈ ನಂಬಿಕೆ ಎಂದೂ ಸುಳ್ಳಾಗಿಲ್ಲ.
Advertisement
ವರುಣದೇವನ ಮೂರ್ತಿದೇವಸ್ಥಾನದ ಮುತ್ತು ಬೆಳೆದ ಐತಿಹಾಸಿಕ ಕೆರೆಯ ನಡು ಮಂಟಪದ ಕೆಳಗೆ ವರುಣದೇವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿಯನ್ನು ಸ್ಥಾಪಿಸಿದ ಅನಂತರ ಪುತ್ತೂರಿನಲ್ಲಿ ಬರ ಪರಿಸ್ಥಿತಿ ಬಂದ ಮಾಹಿತಿಯಿಲ್ಲ. ಕೃಷಿ ಪ್ರಧಾನವಾದ ಪುತ್ತೂರಿನಲ್ಲಿ ಭಕ್ತರು ಸಂಕಷ್ಟ ಕಾಲದಲ್ಲಿ ಮಹಾಲಿಂಗೇಶ್ವರನ ಮೊರೆಹೊಕ್ಕಾಗ ಕ್ಷಿಪ್ರ ಪ್ರಸಾದವೆಂಬಂತೆ ಮಹಾದೇವ ಕಾಪಾಡಿದ ಅನೇಕ ಉದಾಹರಣೆಗಳಿವೆ ಎನ್ನುತ್ತಾರೆ ದೇವಾಲಯಗಳ ಅಧ್ಯಯನಕಾರ ಪಿ.ಜಿ. ಚಂದ್ರಶೇಖರ್. ಎ. 27ಕ್ಕೆ ಸೀಯಾಳಾಭಿಷೇಕ; ಪ್ರಾರ್ಥನೆ
ಎ. 27 ರಂದು ಶ್ರೀ ಮಹಾಲಿಂಗೇಶ್ವರ ದೇವರಿಗೆ ಎಳನೀರಿನ ಅಭಿಷೇಕ ಸೇವೆಯನ್ನು ಬೆಳಗ್ಗೆ 9 ರಿಂದ 11 ಗಂಟೆಯ ತನಕ ನಡೆಸಿ ಸತ್ಯ -ಧರ್ಮ ನಡೆಯಲ್ಲಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುತ್ತದೆ. ಸೇವಾ ರೂಪವಾಗಿ ಸೀಯಾಳ ತರುವ ಭಕ್ತರು ಅಂದು ಬೆಳಗ್ಗೆ 10 ಗಂಟೆ ಯೊಳಗೆ ತಂದೊಪ್ಪಿಸುವಂತೆ ದೇವಾಲಯದ ಪ್ರಕಟನೆ ವಿನಂತಿಸಿದೆ.