Advertisement
ಕಾಮಗಾರಿ ಕುಂಟುತ್ತಾ ಸಾಗಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಉದಯವಾಣಿ ಸುದಿನ ನ.11ರಂದು ‘ರಸ್ತೆ ಅಗೆದು ಹಾಕಿದವರು ನಾಪತ್ತೆ’ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಕಾಮಗಾರಿ ಪ್ರಾರಂಭ ಗೊಂಡಿದ್ದು ಕೆಲಸ ಭರದಿಂದ ಸಾಗುತ್ತಿದೆ.
ಎರಡೂ ದಿಕ್ಕಿನ ಸಂಪರ್ಕ ರಸ್ತೆಯಲ್ಲಿನ ಜಲ್ಲಿಯನ್ನು ಸಮತ್ತಟ್ಟು ಮಾಡಲಾಗುತ್ತಿದ್ದು, ರಸ್ತೆ ವಿಸ್ತರಣೆ ಕಾಮಗಾರಿಯು ನಡೆಯುತ್ತಿದೆ. ಆಳೆತ್ತರದ ಗುಡ್ಡದ ಒಂದು ಬದಿಯಲ್ಲಿ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿದೆ. ತಡೆಗೋಡೆ ಅಪೂರ್ಣ ಸ್ಥಿತಿಯಲ್ಲಿದ್ದ ಸೇತುವೆಯ ಇಕ್ಕೆಲೆಗಳಲ್ಲಿ ಮಣ್ಣು ತುಂಬಿ ತಡೆಗೋಡೆಯ ಹೊಂಡ ಮುಚ್ಚಲಾಗುತ್ತಿದೆ.
Related Articles
ಇದೇ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮುಕ್ಕೂರಿನಿಂದ ಕಾಪುಕಾಡು ತನಕ ರಸ್ತೆ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಇದೆ. ಕುಂಜಾಡಿ ಸೇತುವೆ ಹಾಗೂ ಮುಕ್ಕೂರು-ಕಾಪುಕಾಡು ರಸ್ತೆ ಕಾಮಗಾರಿ ಬೇರೆಬೇರೆ ಸಂಸ್ಥೆಗಳು ನಿರ್ವಹಿಸುತ್ತಿದ್ದು ಕಾಮಗಾರಿ ತತ್ಕ್ಷಣ ಪ್ರಾರಂಭಿಸಬೇಕಿದೆ. ಏಕೆಂದರೆ ಕನ್ನರ್ತ್ಮಜಲು, ಬೋಳಕುಮೇರು ಕ್ರಾಸ್, ಚಾಮುಂಡಿಮೂಲೆ, ಕಾಪು ಬಳಿ ಕಾಮಗಾರಿಗಾಗಿ ರಸ್ತೆ ಅಗೆದಿದ್ದು ಈ ಸ್ಥಳಗಳು ಅಪಘಾತದ ವಲಯವಾಗಿ ಬದಲಾಗುತ್ತಿದೆ.
Advertisement
ಕುಂಜಾಡಿ ಬಳಿ ಸೇತುವೆ ಕಾಮಗಾರಿ ಪ್ರಾರಂಭ ಗೊಂಡಿದೆ. ಮುಕ್ಕೂರು- ಕಾಪು ಕಾಡು ತನಕ ರಸ್ತೆ ವಿಸ್ತರಣೆ ಕಾಮ ಗಾರಿ ತತ್ಕ್ಷಣ ಆರಂಭಿಸಲು ಗುತ್ತಿಗೆ ಸಂಸ್ಥೆಗೆ ಸೂಚನೆ ನೀಡಲಾಗಿದೆ.-ಲಿನ್ಸೆ ಕ್ವಾಲ್ವಿನ್ ಸ್ವೀಕೆರಾ,ಕಿರಿಯ ಎಂಜಿನಿಯರ್ಲೋಕೋಪಯೋಗಿ ಇಲಾಖೆ ಪುತ್ತೂರು