ಪುತ್ತೂರು: 28ನೇ ವರ್ಷದ ಪುತ್ತೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟ ಶನಿವಾರ ಸಂಪನ್ನವಾಯಿತು. ಒಟ್ಟು 155 ಜೊತೆ ಕೋಣಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆದ ಪುತ್ತೂರು ಕಂಬಳ ಶನಿವಾರ ಮಧ್ಯಾಹ್ನ ಅಂತ್ಯವಾಯಿತು.
ಪುತ್ತೂರು ಕೋಟಿ – ಚೆನ್ನಯ ಜೋಡುಕರೆ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಏಳು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಆರು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 12 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 26 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 17 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 86 ಜೊತೆ ಕೋಣಗಳು ಪಾಲ್ಗೊಂಡಿದ್ದವು.
ಫಲಿತಾಂಶ ಪಟ್ಟಿ
ಕನೆಹಲಗೆ: ಬಾರ್ಕೂರು ಶಾಂತಾರಾಮ ಶೆಟ್ಟಿ “ಬಿ”
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಅಡ್ಡ ಹಲಗೆ
ಪ್ರಥಮ: ಮೇರಮಜಲ್ ಮಿಶನ್ ಗಾಡ್ವಿನ್ ವೆಲ್ವಿನ್ ವಾಸ್
ಹಲಗೆ ಮುಟ್ಟಿದವರು: ಬೈಂದೂರು ಹೊಸಮನೆ ಮಹೇಶ್ ಪೂಜಾರಿ
ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್
ಹಗ್ಗ ಹಿರಿಯ:
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ “ಬಿ”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ನಂದಳಿಕೆ ನವ್ಯತ – ನಮೃತ ಶೀಕಾಂತ್ ಭಟ್ “ಬಿ”
ಓಡಿಸಿದವರು: ಗುರು ಚರಣ್ ಪಟ್ಟೆ
ಇದನ್ನೂ ಓದಿ:ಕುದುರೆ ಮೇಲೆ ನಿಂತು ಪೋಸ್ ಕೊಟ್ಟ ನಟ: ನೆಟ್ಟಿಗರು ಫುಲ್ ಗರಂ
ಹಗ್ಗ ಕಿರಿಯ:
ಪ್ರಥಮ: ಮೂಡಬಿದ್ರೆ ನ್ಯೂ ಪಡಿವಾಳ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಳ್ “ಎ”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಸಿದ್ಧಕಟ್ಟೆ ಹೊಂಗಾರಹಿತ್ಲು ಮೋಕ್ಷಿತ್ ಕಾಂತಣ್ಣ ಶೆಟ್ಟಿ
ಓಡಿಸಿದವರು: ನಕ್ರೆ ಮಂಜುನಾಥ ಭಂಡಾರಿ
ನೇಗಿಲು ಹಿರಿಯ:
ಪ್ರಥಮ: ಬೋಳದ ಗುತ್ತು ಜಗದೀಶ್ ಶೆಟ್ಟಿ “ಎ”
ಓಡಿಸಿದವರು: ಮರೋಡಿ ಶ್ರೀಧರ್
ದ್ವಿತೀಯ: ಇರುವೈಲು ಪಾನಿಲ ಬಾಡ ಪೂಜಾರಿ “ಬಿ”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ಇದನ್ನೂ ಓದಿ: ಛೇ.. ಅಮಾನವೀಯ ಘಟನೆ : ಆ ಪ್ರಾಣಿಗೆ ಈ ರೀತಿ ಮಾಡಬಾರದಿತ್ತು..
ನೇಗಿಲು ಕಿರಿಯ:
ಪ್ರಥಮ: ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಕುಮಾರ್
ಓಡಿಸಿದವರು: ಮರೋಡಿ ಶ್ರೀಧರ್
ದ್ವಿತೀಯ: ಅಳಿಯೂರು ಮಿತ್ತೊಟ್ಟು ಸೀತಾರಾಮ ಆನಂದ ಶೆಟ್ಟಿ
ಓಡಿಸಿದವರು: ಮಾಂಟ್ರಾಡಿ ರಾಜೇಶ್ ಆಚಾರ್ಯ