Advertisement

ಪುತ್ತೂರು: ಜೀಪ್-ರಿಕ್ಷಾ ಢಿಕ್ಕಿ; ಮೂವರು ಕೂಲಿ ಕಾರ್ಮಿಕರು ಗಂಭೀರ

12:05 PM Jan 29, 2022 | Team Udayavani |

ಪುತ್ತೂರು: ಕೆಯ್ಯೂರು ಗ್ರಾಮದ ಪೊಯ್ಯೋಳೆ ಎಂಬಲ್ಲಿ ಜೀಪ್ ಮತ್ತು ರಿಕ್ಷಾ ಢಿಕ್ಕಿಯಾಗಿ ಮೂವರ ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡ  ಘಟನೆ ಶನಿವಾರ ನಡೆದಿದೆ.

Advertisement

ಕೆಯ್ಯೂರಿನಿಂದ ದೇರ್ಲ ಕಡೆಗೆ ಹೋಗುತ್ತಿದ್ದ ಜೀಪು, ದೇರ್ಲ ಕಡೆಯಿಂದ ಕೆಯ್ಯೂರು ಕಡೆಗೆ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ರಿಕ್ಷಾ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಕೂಲಿ ಕಾರ್ಮಿಕರಾದ ಪ್ರವೀಣ್, ಗುರು, ಅನೀಶ್ ಎಂಬವರು ತ್ರೀವವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದ್ಯೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.

ರಿಕ್ಷಾ ಚಾಲಕ ಗಿರಿಧರ ಎಟ್ಯಡ್ಕ, ಜೀಪು ಚಾಲಕ ಚಂದ್ರಶೇಖರ ಕಣಿಯಾರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next