Advertisement
ಶುಕ್ರವಾರ ಸಂಜೆ ದೇವಸ್ಥಾನದಲ್ಲಿ ಉತ್ಸವ, ವಸಂತ ಕಟ್ಟೆ ಪೂಜೆ ನಡೆದು ಬಳಿಕ ಪೇಟೆ ಸವಾರಿಗೆ ದೇವರು ಹೊರಟರು. ಕೋರ್ಟ್ ರಸ್ತೆಯಾಗಿ ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳುವಾರು ಬೈಲ್‌ಗೆ ತೆರಳುವ ಹಾದಿಯಲ್ಲಿ ಕಟ್ಟೆ ಪೂಜೆ ನಡೆಯಿತು. ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು .
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಎ. 14 ರಂದು ಮೇಷ ಸಂಕ್ರಮಣದ ಹಿನ್ನೆಲೆಯಲ್ಲಿ ವಿಶೇಷ ಸೇವೆ ನಡೆಯಲಿದೆ. ರಾತ್ರಿ ಉತ್ಸವ, ವಸಂತ ಕಟ್ಟೆಪೂಜೆ ನಡೆದು, ಬೊಳುವಾರು ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್ ಗೆ ದೇವರ ಸವಾರಿ ಹೊರಡಲಿದೆ.