Advertisement
ನಗರದ ಹೃದಯ ಭಾಗದ ಬಿಇಒ ಕಚೇರಿ ಬಳಿ 8 ಸೆಂಟ್ಸ್ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಜಾಗ ಗುರುತಿಸಿ 2018ರ ಫೆಬ್ರವರಿಯಲ್ಲಿ ಸಮತಟ್ಟುಗೊಳಿಸಿ ಮಾರ್ಚ್ ತಿಂಗಳಲ್ಲಿ ಆಗಿನ ಶಾಸಕಿ ಶಕುಂತಳಾ ಟಿ. ಶೆಟ್ಟಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಅದಾದ ಬಳಿಕ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗಿ ಕಾಮಗಾರಿ ನಿಧಾನ ಗತಿಗೆ ಸಾಗಿತ್ತು. ಸೆಪ್ಟಂಬರ್‌ನಲ್ಲಿ ಮತ್ತೆ ಕಾಮಗಾರಿಗೆ ಚಾಲನೆ ದೊರೆತಿತ್ತು.
ಮಿನಿ ವಿಧಾನಸೌಧ, ಕೋರ್ಟ್, ತಾ.ಪಂ. ಕಚೇರಿ, ನಗರಸಭಾ ಕಚೇರಿ, ಸರಕಾರಿ ಆಸ್ಪತ್ರೆ, ಸರಕಾರಿ ಮಹಿಳಾ ಕಾಲೇಜು, ವಾರದ ಸಂತೆ ಎಲ್ಲವೂ ಇರುವ ಬಹುಮುಖ್ಯ ಜಾಗದಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಾಣಗೊಳ್ಳುತ್ತಿದ್ದು, ಪುತ್ತೂರಿನಲ್ಲಿ ಹೆಚ್ಚು ಮಂದಿಗೆ ಪ್ರಯೋಜನವಾಗುವ ನಿರೀಕ್ಷೆ ಗರಿಗೆದರಿದೆ. ನೆರೆಯ ಬಂಟ್ವಾಳದಲ್ಲಿ ಈಗಾಗಲೇ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡಿದ್ದು, ಪುತ್ತೂರಿನ ಕ್ಯಾಂಟೀನ್ ಉದ್ಘಾಟನೆ ಬೇಗನೆ ಆಗಬೇಕೆನ್ನುವ ಆಶಯ ಸಾರ್ವಜನಿಕರದ್ದು.
Related Articles
ಕ್ಯಾಂಟೀನ್ ಕಟ್ಟಡದ ಒಳಭಾಗದಲ್ಲಿ ಒಂದಷ್ಟು ಕೆಲಸಗಳು ಬಾಕಿ ಇರುವು ದರಿಂದ ಉದ್ಘಾಟನೆಗೆ ವಿಳಂಬ ವಾಗಿದೆ. ಜನವರಿ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಬಹುದು ಎನ್ನುವ ಮಾಹಿತಿ ಸಂಬಂಧಪಟ್ಟವರಿಂದ ಲಭ್ಯವಾಗಿದೆ. ಶೀಘ್ರ ಉದ್ಘಾಟನೆಗೊಳ್ಳದಿದ್ದಲ್ಲಿ ಮತ್ತೆ ಚುನಾವಣಾ ನೀತಿ ಸಂಹಿತೆಗೆ ಒಳಪಟ್ಟು ಮತ್ತೆ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು, ಜನಪ್ರತಿನಿಧಿಗಳ ಗಮನಹರಿಸಿದರೆ ಉತ್ತಮ.
Advertisement
ಮಾಹಿತಿ ಪಡೆವೆಪುತ್ತೂರಿನ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸಂಬಂಧಿಸಿ ನನಗೆ ಮಾಹಿತಿ ಇಲ್ಲ. ಜಿಲ್ಲೆಯ ಇತರ ಕಡೆಗಳಲ್ಲೂ ಇಂದಿರಾ ಕ್ಯಾಂಟೀನ್ ಕಾಮಗಾರಿಗಳು ನಡೆಯುತ್ತಿದ್ದು, ಒಟ್ಟಿಗೇ ಉದ್ಘಾಟನೆಯಾಗಬಹುದು. ಮಾಹಿತಿ ಪಡೆದುಕೊಳ್ಳುತ್ತೇನೆ.
– ಸಂಜೀವ ಮಠಂದೂರು,
ಶಾಸಕರು ಮಾಹಿತಿ ಪಡೆದಿರುವೆ
ಸರಕಾರಿ ಆಸ್ಪತ್ರೆ, ಮಿನಿ ವಿಧಾನಸೌಧ ಇರುವುದರಿಂದ ಆಸಕ್ತಿಯಿಂದ ಗಮನಹರಿಸಿ ಸೂಕ್ತ ಜಾಗವನ್ನು ಗುರುತಿಸಿದ್ದೇವೆ. ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಒತ್ತಾಯಿಸಿದ್ದು, ಈ ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗುತ್ತದೆ.
– ಶಕುಂತಳಾ ಟಿ. ಶೆಟ್ಟಿ,
ಮಾಜಿ ಶಾಸಕರು ವಿಶೇಷ ವರದಿ