Advertisement

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

08:02 PM Nov 05, 2024 | Team Udayavani |

ಪುತ್ತೂರು: ಏಳು ವರ್ಷಗಳ ಹಿಂದೆ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ವಾಹನವೊಂದರ ಚಾಲಕ ಮೃತಪಟ್ಟ ಘಟನೆಗೆ ಸಂಬಂಧಿಸಿ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಲಾರಿ ಚಾಲಕನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

Advertisement

2017ರ ಸೆ. 9ರಂದು ನೆಲ್ಯಾಡಿ ಕಡೆಗೆ ಹೋಗುತ್ತಿದ್ದ ಲಾರಿ (ಟಿಎನ್‌ 18:ಎಎಚ್‌ 8852) ನೀರಕಟ್ಟೆಯಲ್ಲಿ ಬೇರೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ನೋಂದಣಿಯಾಗದ ಮಿನಿ ಟೆಂಪೋ ದೋಸ್ತ್ ಗೆ ಢಿಕ್ಕಿ ಹೊಡೆದಿತ್ತು. ದೋಸ್ತ್ ಚಾಲಕ ನವಾಝ್ (32) ಮೃತಪಟ್ಟಿದ್ದರು.

ಇಸ್ಮಾಯಿಲ್‌ ಕೋಲ್ಪೆ ನೀಡಿದ್ದ ದೂರಿನ ಮೇರೆಗೆ ಲಾರಿ ಚಾಲಕ ಹುಬ್ಬಳ್ಳಿಯ ಶಿವಪ್ಪ ಸುರೇಶ ಅವರ ವಿರುದ್ಧ ಪುತ್ತೂರು ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಲಾರಿ ಚಾಲಕನನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next