Advertisement
ಕೋಡಿಂಬಾಡಿ ಮಹಿಷಮರ್ದಿನಿ, ಪುತ್ತೂರು ಮಹಾಲಿಂಗೇಶ್ವರ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸಿ ದರ್ಬೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಪ್ರಕಾರ, ಚೆಂಡೆ ಬಳಗ, ನಾಸಿಕ್ ಬ್ಯಾಂಡ್ ಮೆರವಣಿಗೆಗೆ ಮೆರುಗು ತುಂಬಿದವು. ಮೊಳಗಿದ ಘೋಷಣೆ
ಮೆರವಣಿಗೆಯಲ್ಲಿ ಕಾಂಗ್ರೆಸ್ ಸಾಧನೆಗಳ ಕುರಿತು ಘೋಷಣೆ ಮೊಳಗಿತು. ಅಶೋಕ್ ಕುಮಾರ್ ರೈ ಪರ ಕಾರ್ಯ ಕರ್ತರು ಜೈಕಾರ ಹಾಕಿದರು. ಬಳಿಕ ಮೈದಾನದಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಸಮಾಗಮಗೊಂಡರು.
Related Articles
ಅಶೋಕ್ ಕುಮಾರ್ ರೈ ಮಾತನಾಡಿ, ನನಗೆ ಹಣದ ಆಸೆ ಇಲ್ಲ. ಈಗಾಗಲೇ ದುಡಿದ ಹಣದಲ್ಲಿ ಒಂದು ಪಾಲನ್ನು ಸಮಾಜಕ್ಕೆ ಮೀಸಲಿಟ್ಟಿದ್ದೇನೆ. 22 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ನೆರವಾಗಿದ್ದೇನೆ. ಜಾತಿ, ಮತ, ಧರ್ಮ ಮೀರಿ ಸರ್ವಧರ್ಮದ ಕಟ್ಟಕಡೆಯ ವ್ಯಕ್ತಿಗೆ ಸ್ಪಂದಿಸಿದ್ದೇನೆ. ಕಳೆದ 5 ವರ್ಷದ ಬಿಜೆಪಿ ಆಡಳಿತದಲ್ಲಿ ಅಕ್ರಮ-ಸಕ್ರಮ, 94ಸಿಯಲ್ಲಿ ಬಡವರನ್ನು ಲೂಟಿ ಮಾಡಲಾಗಿದೆ.ಶಾಸಕನಾಗಿ ಆಯ್ಕೆಯಾದ ಬಳಿಕ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ ಸರ್ವ ಸಮಾಜದ ಹಿತಕ್ಕಾಗಿ ದುಡಿಯುವೆ ಎಂದರು.
Advertisement
ಕಾಂಗ್ರೆಸ್ ವಕ್ತಾರರಾದ ಭವ್ಯಾ ನರಸಿಂಹಮೂರ್ತಿ ಮಾತನಾಡಿ, ಮಂಗಳೂರಿಗೆ ಮುಕುಟ ಪ್ರಾಯವಾಗಿದ್ದ ವಿಜಯ ಬ್ಯಾಂಕನ್ನು ಗುಜರಾತಿನ ಬರೋಡ ಬ್ಯಾಂಕ್ ಜತೆ ವಿಲೀನಗೊಳಿಸಿ, ಮಂಗಳೂರು ವಿಮಾನ ನಿಲ್ದಾಣವನ್ನು ಆದಾನಿಯ ತೆಕ್ಕೆಗೆ ನೀಡಿ ಬಿಜೆಪಿ ಜಿಲ್ಲೆಗೆ ದ್ರೋಹ ಬಗೆದಿದೆ. ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡದೆ ಅವಗಣಿಸಿದೆ. ಇದು ದ.ಕ. ಜಿಲ್ಲೆಗೆ ಬಿಜೆಪಿ ಮಾಡಿದ ಅವಮಾನ ಎಂದರು.
ವಿಧಾನಪರಿಷತ್ ಸದಸ್ಯ ಮಂಜು ನಾಥ ಭಂಡಾರಿ ಮಾತನಾಡಿ, ಬಿಜೆಪಿಯು ಈ ಬಾರಿಯ ಚುನಾವಣೆಯು ಭಯೋತ್ಪಾದಕರು ಹಾಗೂ ರಾಷ್ಟ್ರಭಕ್ತರ ನಡುವಿನ ಹೋರಾಟ ಎಂದಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ್ದು ಕಾಂಗ್ರೆಸ್ ಪಕ್ಷದವರು. ಆದರೆ ಬಿಜೆಪಿ ತನ್ನ ಆಡಳಿತದಲ್ಲಿ ಭಯೋತ್ಪಾದಕರನ್ನು ವಿಮಾನದಲ್ಲಿ ಕರೆದು ಕೊಂಡು ಹೋಗಿತ್ತು. ಕಾಂಗ್ರೆಸ್ ಎಂದೆಂದಿಗೂ ನೈಜ ರಾಷ್ಟ್ರಭಕ್ತ ಪಕ್ಷವಾಗಿದೆ ಹೊರತು ಬಿಜೆಪಿ ಅಲ್ಲ ಎಂದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಜಿಲ್ಲಾ ಉಸ್ತುವಾರಿ ಶಿಭಾ ರಾಮಚಂದ್ರನ್, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಜಿಲ್ಲಾ ಯುವಕ ಕಾಂಗ್ರೆಸ್ ಅಧ್ಯಕ್ಷ ಲುಕಾ¾ನ್ ಬಂಟ್ವಾಳ, ಕೆಪಿಸಿಸಿ ಸದಸ್ಯ ಕಾವು ಹೇಮನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಕೃಪಾ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ಕೆ.ವಿ. ರಾಜರಾಮ್ ಮೊದಲಾದವರು ಉಪಸ್ಥಿತರಿದ್ದರು.