Advertisement
ನಗರ ಠಾಣೆಯ ಹಿಂಭಾಗದಲ್ಲಿ ಇರುವ ಪೊಲೀಸ್ ಕರ್ರ್ಟರ್ಸ್‌ನಲ್ಲಿ ಹಾಲಿ 25 ವಸತಿ ವ್ಯವಸ್ಥೆ ಮಾತ್ರ ಇದೆ. ಕೆಲ ಪೊಲೀಸ್ ಸಿಬಂದಿ ಖಾಸಗಿ ವಸತಿ ವ್ಯವಸ್ಥೆಯಲ್ಲಿದ್ದಾರೆ. 50 ವಸತಿಗೃಹಗಳ ನಿರ್ಮಾಣವಾದಲ್ಲಿ ಪುತ್ತೂರಿನ ಹೆಚ್ಚಿನ ಪೊಲೀಸರಿಗೆ ಅನುಕೂಲವಾಗಲಿದೆ.
ಪೊಲೀಸ್ ಹೌಸಿಂಗ್ ಕಾರ್ಪೋರೇಶನ್ ಮೇಲುಸ್ತುವಾರಿಯಲ್ಲಿ ಸುರತ್ಕಲ್ ನಿರ್ಮಿತಿ ಕೇಂದ್ರ ವಸತಿ ಕಟ್ಟಡದ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಪುತ್ತೂರು ನಗರ ಠಾಣೆಯ ಪೊಲೀಸರಿಗಾಗಿ ಸಾಮೆತ್ತಡ್ಕದಲ್ಲಿ 12 ವಸತಿಯ ಕಟ್ಟಡ, ಸಂಚಾರ ಠಾಣೆ ಹಾಗೂ ಸಂಪ್ಯ ಗ್ರಾಮಾಂತರ ಠಾಣೆಯ ಪೊಲೀಸ್ ಸಿಬಂದಿಗಾಗಿ ಸಂಪ್ಯ ಠಾಣೆಯ ಹಿಂಭಾಗದಲ್ಲಿ ಒಟ್ಟು 36 ವಸತಿಯ ಮೂರು ಕಟ್ಟಡಗಳು ಹಾಗೂ ಬನ್ನೂರಿನಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳಿಗಾಗಿ 2 ವಸತಿಯ ಕಟ್ಟಡ ನಿರ್ಮಾಣವಾಗುತ್ತಿವೆ. ಶೀಘ್ರ ಕಾಮಗಾರಿ ಮುಕ್ತಾಯ
ಸಾಮೆತ್ತಡ್ಕದ ಪೊಲೀಸ್ ವಸತಿ ಕಟ್ಟಡ ನಿರ್ಮಾಣ ಮುಕ್ತಾಯಗೊಂಡಿದೆ. ಆದರೆ ಹೆಚ್ಚುವರಿ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ಆಗಿರುವುದರಿಂದ ಆ ಕೆಲಸ ಬಾಕಿ ಇದೆ. ಸಂಪ್ಯ ಗ್ರಾಮಾಂತರ ಠಾಣೆಯ ಬಳಿ ನಿರ್ಮಾಣವಾಗುತ್ತಿರುವ ವಸತಿ ಕಟ್ಟಡ ಕಾಮಗಾರಿ 15 ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಬನ್ನೂರಿನಲ್ಲಿ ನಿರ್ಮಾಣವಾಗುತ್ತಿರುವ ಪಿಎಸ್‌ಐ ವಸತಿ ಕಟ್ಟಡಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿ ನಡೆಯಬೇಕಿದೆ ಎಂದು ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ತಿಳಿಸಿದ್ದಾರೆ.
Related Articles
ಜಿಲ್ಲೆಯ ವಿವಿಧ ಕಡೆಗಳಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ವಸತಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪೊಲೀಸ್ ಹೌಸಿಂಗ್ ಕಾರ್ಪೋರೇಶನ್‌ನಿಂದ ನಿರ್ಮಿತಿ ಕೇಂದ್ರದ ಮೂಲಕ ಕೆಲಸಗಳು ನಡೆಯುತ್ತಿವೆ. ಕೆಲ ಕಡೆಗಳಲ್ಲಿ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಅವರು ನಮಗೆ ಹಸ್ತಾಂತರಿಸಿದ ಬಳಿಕ ಉದ್ಘಾಟನೆಯ ದಿನಾಂಕ ನಿಗದಿಪಡಿಸಲಾಗುವುದು.
-ಬಿ.ಎಂ. ಲಕ್ಷ್ಮೀಪ್ರಸಾದ್,
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
Advertisement
ರಾಜೇಶ್ ಪಟ್ಟೆ