Advertisement
10 ಸಾವಿರ ರೂ. ನೆರವುಹೆಸರು ತಿಳಿಸಲು ಇಚ್ಛಿಸದ ದಾನಿಯೊಬ್ಬರು ಈ ಬಡ ಕುಟುಂಬಕ್ಕೆ 10 ಸಾವಿರ ರೂ. ಧನಸಹಾಯವನ್ನು ನಾಲ್ವರು ಹೆಣ್ಣು ಮಕ್ಕಳ ಅಜ್ಜಿ ಭಾಗೀರಥಿ ಅವರಿಗೆ ಜ. 24ರಂದು ಹಸ್ತಾಂತರಿಸಿದ್ದಾರೆ.
‘ಉದಯವಾಣಿ’ ಸುದಿನ ವರದಿಗೆ ಸ್ಪಂದಿಸಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾ.ಪಂ. ಮಾಜಿ ಅಧ್ಯಕ್ಷೆ ಭವಾನಿ ಚಿದಾನಂದ, ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಬಾಬು ಬಿ. ಮನೆಗೆ ಭೇಟಿ ನೀಡಿ, ಆದಷ್ಟು ಬೇಗ ಮನೆ ನಿರ್ಮಾಣ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಕೆಯ್ಯೂರು ಗ್ರಾ.ಪಂ.ನಿಂದ ಮೂರು ವರ್ಷಗಳ ಹಿಂದೆ ಬಸವ ವಸತಿ ಯೋಜನೆಯಡಿಯಲ್ಲಿ ಸುಂದರಿ ಅವರಿಗೆ ಮನೆ ಮಂಜೂರಾಗಿತ್ತು. ಅಡಿಪಾಯವಾಗಿ ಒಂದು ಭಾಗದ ಗೋಡೆ ನಿರ್ಮಾಣ ಆರಂಭವಾಗಿತ್ತು. ಈ ವೇಳೆ ಸುಂದರಿ ಮೃತಪಟ್ಟಿದ್ದರು. ಇದರಿಂದ ಮನೆ ಕಾಮಗಾರಿ ಸ್ಥಗಿತಗೊಂಡಿತ್ತು.ಅಧಿಕಾರಿಗಳು ಮನೆ ಅಡಿಪಾಯದ ಫೊಟೋ ತೆಗೆದಿದ್ದರೂ ಪ್ರಥಮ ಹಂತದ ಸಹಾಯಧನ ಪಾವತಿ ಬಾಕಿಯಾಗಿದೆ. ಆರ್ಥಿಕ ಸಮಸ್ಯೆಯಿಂದಾಗಿ ನಾಲ್ಕು ವರ್ಷದಿಂದ ಮನೆ ಅಪೂರ್ಣ ಸ್ಥಿತಿಯಲ್ಲಿಯೇ ಇದೆ.