Advertisement
ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪುತ್ತೂರು ಆರಂಭಿಸಿರುವ ಭಾರತ ಸರಕಾರ ಮತ್ತು ರಾಜ್ಯ ಸರಕಾರದ ಯೋಜನೆಯಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಸರಕಾರಿ ಆಸ್ಪತ್ರೆ ಕಟ್ಟಡದ ಮೇಲ್ಛಾವಣಿ ರಚನೆಗೆ ವೈದಾಧಿಕಾರಿಗಳ ಬೇಡಿಕೆಯಂತೆ 5 ಲಕ್ಷ ರೂ. ಮಂಜೂರು ಮಾಡಿಸಿದ್ದೇನೆ. ಇನ್ನೂ 5 ಲಕ್ಷ ರೂ. ಹಣಕ್ಕೆ ರೋಟರಿಯವರು ಕೈಜೋಡಿ ಸಿದರೆ ಅನುಕೂಲ ವಾಗಬಹುದು ಎಂದು ಶಾಸಕರು ಅಭಿಪ್ರಾಯಿಸಿದರು.
Related Articles
ನಗರದಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆರಂಭಿಸ ಬೇಕಾದರೆ ಸರಕಾರಿ ಆಸ್ಪತ್ರೆ 300 ಬೆಡ್‌ಗಳ ಆಸ್ಪತ್ರೆಯಾಗ ಬೇಕು. ಈಗ 100 ಬೆಡ್‌ನ ಆಸ್ಪತ್ರೆಯಾಗಿರುವ ಸರಕಾರಿ ಆಸ್ಪತ್ರೆಯನ್ನು ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸ ಲಾಗುವುದು. ಬಳಿಕ ಮೆಡಿಕಲ್ ಕಾಲೇಜು ಆರಂಭಿಸಲಾ ಗುವುದು ಎಂದು ಹೇಳಿದರು.
Advertisement
ಉತ್ತಮ ಯೋಜನೆಭಾರತೀಯ ಜನೌಷಧ ಕೇಂದ್ರವನ್ನು ಉದ್ಘಾಟಿಸಿದ ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಸಮಾಜ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಔಷಧ ದೊರೆತು ಆರೋಗ್ಯವಂತನಾಗಿರಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೆಟಕುವ ಬೆಲೆಯಲ್ಲಿ ಔಷಧ ವಿತರಸುವ ಯೋಜನೆಯನ್ನು ಅನುಷ್ಠಾನ ಮಾಡಿದ್ದಾರೆ. ಇದೊಂದು ಉತ್ತಮ ಯೋಜನೆ ಎಂದರು. ಸೇವೆಯ ಉದ್ದೇಶ
ಮುಖ್ಯ ಅತಿಥಿಯಾಗಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿ ಬಸೂÅರು ರಾಜೀವ ಶೆಟ್ಟಿ ಮಾತನಾಡಿ, ಜನೌಷಧ ಕೇಂದ್ರಕ್ಕೆ ಸರಕಾರ ಸಬ್ಸಿಡಿ ದರದಲ್ಲಿ ಔಷಧ ನೀಡುತ್ತಿದೆ. ಈಗ 615 ವಿವಿಧ ಔಷಧಗಳನ್ನು ಸರಕಾರ ಪೂರೈಕೆ ಮಾಡುತ್ತದೆ. ರಾಜ್ಯದಲ್ಲಿ 200 ಮಳಿಗೆಗಳನ್ನು ತೆರೆಯಲು ಸರಕಾರ ರೆಡ್ ಕ್ರಾಸ್ ಸಂಸ್ಥೆಗೆ ಅವಕಾಶ ಕೊಟ್ಟಿದೆ. ಹಣಕ್ಕಾಗಿ ಕೆಲಸ ಮಾಡದೆ ಸೇವೆ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ಹೇಳಿದರು. ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್, ತಾ.ಪಂ. ಸದಸ್ಯೆ ಭವಾನಿ ಚಿದಾನಂದ, ನಗರ ಸಭೆ ಅಧ್ಯಕ್ಷೆ ಜಯಂತಿ ಬಲಾ°ಡು ಜನೌಷಧ ಕೇಂದ್ರದ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವಂತೆ ಹೇಳಿದರು. ಸರಕಾರದ “ಕಾಯ ಕಲ್ಪ’ ಪ್ರಶಸ್ತಿ ಯೋಜನೆಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆ ಸಮಾಧಾನಕರ ಬಹುಮಾನ ಪಡೆದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಪ್ರದೀಪ್ ಕುಮಾರ್ ಅವರನ್ನು ರೆಡ್ ಕ್ರಾಸ್ ಪುತ್ತೂರು ಘಟಕದ ವತಿಯಿಂದ ಗೌರವಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು. ಭಾರತೀಯ ರಡ್ ಕ್ರಾಸ್ ಪುತ್ತೂರು ಘಟಕದ ಸಭಾಪತಿ ಆಸ್ಕರ್ ಆನಂದ್ ಸ್ವಾಗತಿಸಿ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರದೀಪ್ ಕುಮಾರ್ ವಂದಿಸಿದರು. ರೆಡ್ ಕ್ರಾಸ್ ಸಂಸ್ಥೆ ಪುತ್ತೂರು ಘಟಕದ ಸದಸ್ಯ ಪ್ರೊ| ಬಿ. ಜೆ. ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಜಾಲತಾಣ ಉದ್ಘಾಟನೆ
ಜೇಸಿಐ ಪುತ್ತೂರು ಮತ್ತು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಪುತ್ತೂರು ಘಟಕ ಕೈಗೊಂಡ ರಕ್ತದಾನಿ ಗಳ ಜಾಲತಾಣ (ಬ್ಲಿಡ್ ಫಾರ್ ಆಲ್)ವನ್ನು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಉದ್ಘಾಟಿಸಿದರು. ಯೋಜನೆಯಲ್ಲಿ ರಕ್ತದಾನಿಗಳ ಮಾಹಿತಿ ಜಾಲ ತಾಣದಲ್ಲಿ ಲಭ್ಯವಿರುತ್ತದೆ. ರಕ್ತದ ಅಗತ್ಯವುಳ್ಳವರು ಜಾಲ ತಾಣದಲ್ಲಿ ನೋಡಿ, ನೇರವಾಗಿ ಆ ವ್ಯಕ್ತಿಗೆ ಅಥವಾ ಸಂಘ ಸಂಸ್ಥೆಯನ್ನು ಸಂಪರ್ಕಿಸಿ ರಕ್ತವನ್ನು ಪಡೆದುಕೊಳ್ಳಲು ಅವಕಾಶವಿದೆ ಎಂದು ಪ್ರೊ| ಬಿ. ಜೆ. ಸುವರ್ಣ ಮಾಹಿತಿ ನೀಡಿದರು.