ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಒಟ್ಟು 112 ಮಂಜೂರಾತಿ ಹುದ್ದೆಗಳಿದ್ದರೂ 47 ಮಾತ್ರ ಭರ್ತಿಯಾಗಿವೆ. ಇನ್ನೂ 65 ಹುದ್ದೆಗಳು ಖಾಲಿಯಾಗಿವೆ. ಕೆಲವೊಂದು ಪ್ರಮುಖ ಹುದ್ದೆಗಳು ಸಹಿತ ಶೇ. 60ರಷ್ಟು ಹುದ್ದೆಗಳು ಸರಕಾರದ ಮಟ್ಟದಿಂದ ಭರ್ತಿಗೊಂಡಿಲ್ಲ.
Advertisement
ಸರಕಾರಿ ಆಸ್ಪತ್ರೆಯಲ್ಲಿ ಪ್ರಮುಖವಾಗಿ ಸರ್ಜನ್, ಮುಖ್ಯ ಆರೋಗ್ಯಾಧಿಕಾರಿ, ಫಿಸಿಷಿಯನ್ ತಲಾ ಒಂದು ಹುದ್ದೆ ಹಾಗೂ ಸಾಮಾನ್ಯ ಕರ್ತವ್ಯ ಅಧಿಕಾರಿ 2 ಹುದ್ದೆಗಳು ಖಾಲಿಯಾಗಿವೆ. ಪ್ರಸೂತಿ ಮತ್ತು ಹೆರಿಗೆ ತಜ್ಞರ ಹುದ್ದೆ ಖಾಲಿಯಾಗಿದ್ದು, ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಿಂದ ನಿಯೋಜನೆಗೊಂಡಿರುವ ಡಾ| ಸಂದೀಪ್ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ಸ್ವತ್ಛತೆಯ ವ್ಯವಸ್ಥೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗತ್ಯವಾಗಿರುವ ಗ್ರೂಪ್ ಡಿ ಸಿಬಂದಿ 34 ಹುದ್ದೆಗಳು ಮಂಜೂರಾತಿಯಲ್ಲಿದ್ದರೂ, ಒಂದು ಹುದ್ದೆ ಮಾತ್ರ ಭರ್ತಿಯಾಗಿದೆ. ಮಂಜೂರುಗೊಂಡ 33 ಹುದ್ದೆಗಳು ಖಾಲಿಯಾಗಿವೆ. ಹಾಲಿ ಆಸ್ಪತ್ರೆಯ ಸ್ವತ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರೂಪ್ “ಡಿ’ಗೆ 18 ಮಂದಿ ಮತ್ತು 12 ಆರೋಗೆÂàತರ ಸಿಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.
Related Articles
ಸಾರ್ವಜನಿಕ ಬೇಡಿಕೆಗೆ ಪೂರಕವಾಗಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಹಾಗೂ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯೂ ಒಂದೆಡೆ ನಡೆಯುತ್ತಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಪ್ರಸ್ತುತ ಹಿರಿಯ ಆರೋಗ್ಯ ವೈದ್ಯಾಧಿಕಾರಿ, ಮೂಳೆ ಮತ್ತು ಕೀಲು ತಜ್ಞರು, ನೇತ್ರ ತಜ್ಞರು, ಅರಿವಳಿಕೆ ತಜ್ಞರು, ಜನರಲ್ ಸರ್ಜನ್, ಕಿವಿ ಮೂಗು ಗಂಟಲು ತಜ್ಞರು, ದಂತ ಆರೋಗ್ಯಾಧಿಕಾರಿಗಳು ಸಮರ್ಪಕವಾದ ಸೇವೆ ನೀಡುತ್ತಿದ್ದಾರೆ. ಮಂಜೂರಾಗಿರುವ 25 ಶುಶ್ರೂಷಕಿಯರ ಹುದ್ದೆಗಳು ಭರ್ತಿಗೊಂಡಿವೆ.
Advertisement
ಕೊರತೆಯಾದ ಮಕ್ಕಳ ತಜ್ಞರು ಪುತ್ತೂರು ಸರಕಾರಿ ಆಸ್ಪತ್ರೆಗೆ ಅಗತ್ಯವಾಗಿ ಮತ್ತು ಪ್ರಮುಖವಾಗಿ ಕೊರತೆಯಾಗಿರುವುದು ಮಕ್ಕಳ ತಜ್ಞರು. ಗರ್ಭಿಣಿಯಾಗಿದ್ದು, ಒತ್ತಡದ ಮಧ್ಯೆಯೂ ಜನಸ್ನೇಹೀ ಮಕ್ಕಳ ತಜ್ಞರಾಗಿ ಕೆಲಸ ಮಾಡುತ್ತಿದ್ದ ವೈದ್ಯೆಯೊಬ್ಬರು ಜನಪ್ರತಿನಿಧಿಯೊಬ್ಬರು ತೋರಿದ ವರ್ತನೆಗೆ ಬೇಸತ್ತು ದೀರ್ಘ ಕಾಲದ ರಜೆ ಹಾಕಿದ್ದಾರೆ. ವೈದ್ಯರ ರಜೆಯ ಕಾರಣ ಇದೀಗ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ಕೊರತೆ ವಿಪರೀತವಾಗಿ ಕಾಡುತ್ತಿದೆ. ಗಮನಕ್ಕೆ ತಂದಿದ್ದೇವೆ
ಆಸ್ಪತ್ರೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳು ಜೋಡಣೆಗೊಳ್ಳುತ್ತಿವೆ. ಕೆಲವೊಂದು ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಪಟ್ಟಂತೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ರಕ್ಷಾ ಸಮಿತಿಯ ಅಧ್ಯಕ್ಷ ರಾದ ಶಾಸಕರಿಗೂ ವಿನಂತಿ ಮಾಡಿದ್ದು, ಈ ನಿಟ್ಟಿನಲ್ಲಿ ಅವರು ಪ್ರಯತ್ನ ನಡೆಸುತ್ತಿದ್ದಾರೆ.
– ಡಾ| ಆಶಾ ಜ್ಯೋತಿ ಕೆ.,
ಆಡಳಿತ ವೈದ್ಯಾಧಿಕಾರಿ, ಸರಕಾರಿ ಆಸ್ಪತ್ರೆ, ಪುತ್ತೂರು ರಾಜೇಶ್ ಪಟ್ಟೆ