ಪುತ್ತೂರು: ಪ್ರಖ್ಯಾತ ಸ್ವರ್ಣೋದ್ಯಮಿ,ಸಮಾಜಮುಖಿ ನಾಯಕ, ವಿಎಚ್‌ಪಿ ಮುಖಂಡ
ಗುಂಡಿಬೈಲು ಲಕ್ಷ್ಮೀನಾರಾಯಣ ಆಚಾರ್ಯ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಅಲ್ಪಕಾಲದ ಅನಾರೋಗ್ಯದಿಂದ ಬಳಲುತಿದ್ದ ಜಿ.ಎಲ್ ಆಚಾರ್ಯ ಅವರು ,ಪತ್ನಿ , ಪುತ್ರ ಉದ್ಯಮಿ ಬಲರಾಮ ಆಚಾರ್ಯ,ಪುತ್ರಿ ಯನ್ನು ಅಗಲಿದ್ದಾರೆ.
ಮೂಲತಃ ಉಡುಪಿಯ ಗುಂಡಿಬೈಲಿನವರಾಗಿದ್ದ ಆಚಾರ್ಯರು 1957ರಲ್ಲಿ ಜಿ.ಎಲ್ ಚಿನ್ನಾಭರಣ ಮಳಿಗೆಯನ್ನು ಉದ್ಯಮವನ್ನು ಪ್ರಾರಂಭಿಸಿದ್ದ ಅವರ ಮಳಿಗೆ ಇಂದು ಸುಳ್ಯ, ಪುತ್ತೂರು, ಹಾಸನ, ಕುಶಾಲನಗರ ಶೋ ರೂಂಗಳನ್ನು ಹೊಂದಿದೆ.ಮಂಗಳೂರಿನ ಲಕ್ಷ್ಮೀದಾಸ್ ಜ್ಯುವೆಲ್ಲರಿಗೆ ಜಿ.ಎಲ್ ಆಚಾರ್ಯರು ಪಾಲುದಾರರಾಗಿದ್ದರು.
ವ್ಯವಹಾರ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಶೈಕ್ಷಣಿಕ ,ಕಲಾ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರಕ್ಕೂ ಗಣನೀಯ ಕೊಡುಗೆಯನ್ನು ಅವರು ನೀಡಿದ್ದರು.ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದರು.
ಪುತ್ತೂರು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷರಾಗಿ, ಪುತ್ತೂರು ಟೌನ್ ಹಾಲ್ ಸ್ಥಾಪಕ ಸಮಿತಿಯವರೊಳೊಬ್ಬರಾಗಿದ್ದರು. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಪುತ್ತೂರು ಅಸುಪಾಸಿನ ಹಲವಾರು ದೇವಸ್ಥಾನ, ದೇವಸ್ಥಾನ ಬ್ರಹ್ಮಕಲಶ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಆಚಾರ್ಯ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಶುಕ್ರವಾರ ರಜೆ ಸಾರಲಾಗಿದೆ.