Advertisement

ನಾಯಕರಾಗಲು ಗಾಂಧಿ ಬದುಕು ಪಾಠ

12:32 PM Oct 03, 2018 | |

ಪುತ್ತೂರು: ಯೌವನದಲ್ಲಿ ಎಲ್ಲರಂತೆ ತಾನೂ ತಪ್ಪು ಮಾಡುತ್ತಾ ಬೆಳೆದ ಮಹಾತ್ಮಾ ಗಾಂಧೀಜಿ, ಮುಂದೆ ವಿಶ್ವ ನಾಯಕರಾಗಿ ರೂಪುಗೊಳ್ಳುತ್ತಾರೆ. ಅವರಂತೆಯೇ ಎಲ್ಲರೂ ಧೀಮಂತ ನಾಯಕರಾಗಿ ರೂಪುಗೊಳ್ಳ ಬಹುದು ಎಂದು ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಅವರು ಹೇಳಿದರು.

Advertisement

ಪುತ್ತೂರು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆದ ಗಾಂಧಿ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸತ್ಯ ಹರಿಶ್ಚಂದ್ರ, ಶ್ರವಣ ಕುಮಾರ ನಾಟಕಗಳನ್ನು ನೋಡುತ್ತಾ ಗಾಂಧೀಜಿ ಅವರಲ್ಲಿ ಪರಿವರ್ತನೆ ಆಯಿತು. ಮುಂದೆ ಜಗತ್ತಿನ ಶಾಂತಿದೂತನಾಗಿ, ಅಹಿಂಸಾ ಮಾರ್ಗದ ಪ್ರತಿಪಾದಕರಾಗಿ ಕಾಣಿಸಿಕೊಳ್ಳುತ್ತಾರೆ. ಸ್ವಚ್ಛತೆಯ ಕುರಿತು ಆಂದೋಲನ ನಡೆಸಿದ್ದ ಗಾಂಧೀಜಿ ಕಂಡ ಕನಸನ್ನು ನನಸು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಪಣತೊಟ್ಟಿದ್ದಾರೆ. ಈ ಕನಸನ್ನು ನನಸು ಮಾಡಲು ಎಲ್ಲರೂ ಶ್ರಮಿಸಬೇಕು ಎಂದರು.

ಪರಿವರ್ತನೆಗೆ ಸಾಕ್ಷಿ
ಮನಃಪರಿವರ್ತನೆ ಮೂಲಕ ಏನನ್ನಾದರೂ ಸಾಧಿ ಸಬಹುದು ಎನ್ನುವುದಕ್ಕೆ ಜಗತ್ತಿನಲ್ಲಿ ಉತ್ತಮ ಸಾಕ್ಷಿ ದಾರ್ಶನಿಕ, ಶ್ರೇಷ್ಠ ಮಾನವತಾವಾದಿ ಮಹಾತ್ಮಾ ಗಾಂಧೀಜಿ ಬದುಕು ಜಗತ್ತಿನ ಎಲ್ಲ ಜನತೆಗೂ ಜೀವನ ಪಾಠ. ಗಾಂಧಿಧೀಜಿ ಅವರ ಅಹಿಂಸಾ ಚಿಂತನೆ ಬುದ್ಧ ಚಿಂತನೆಗಿಂತಲೂ ಶ್ರೇಷ್ಠ ಎಂದು ಅಭಿಪ್ರಾಯಪಟ್ಟರು.

ಗಾಂಧಿ ಅವರ ತಣ್ತೀ ಸಿದ್ಧಾಂತಗಳು ವ್ಯಕ್ತಿತ್ವ ಬೆಳೆಸಿಕೊಳ್ಳಲು ಬಯಸುವವರಿಗೆ ನಿಜವಾದ ಮಾಗದರ್ಶಿ. ಸೈದ್ಧಾಂತಿಕ ನೆಲೆಯ ಅವರ ಅಹಿಂಸಾ ಹೋರಾಟ ಇಂದಿಗೂ ಪ್ರಸ್ತುತ. ಅವರು ‘ಪಂಚೆ -ಶಾಲು’ ಮೂಲಕ ವಿಶ್ವದ ಗಮನ ಸೆಳೆದ ಸರಳ ವ್ಯಕ್ತಿ. ಅವರ ಅಹಿಂಸಾ ತಣ್ತೀ ಹೇಡಿತನವಲ್ಲ. ಬ್ರಿಟಿಷರ ವ್ಯಕ್ತಿತ್ವ, ಅವರ ಶಿಕ್ಷಣ ವ್ಯವಸ್ಥೆಯನ್ನು ಎಂದಿಗೂ ವಿರೋಧಿಸಿಲ್ಲ. ಆದರೆ ಬ್ರಿಟಿಷರ ನೀತಿಯನ್ನು ಖಂಡಿ ಸಿದ್ದರು. ಯಾವುದೇ ಆಚರಣೆಗಳು ಸಂಭ್ರಮವಾಗಬೇಕಿಲ್ಲ. ಜನತೆ ಸೇವೆ ಮಾಡುವುದೂ ಆಚರಣೆ ಆಗಬಹುದು. ಗಾಂಧಿ ಚಿಂತನೆಗಳ ಪ್ರಭಾವ ತಮ್ಮ ಮಕ್ಕಳ ಮೇಲಾಗುವಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿಯನ್ನು ಹೆತ್ತವರು ಹೊರಬೇಕು ಎಂದು ಕರೆ ಕೊಟ್ಟರು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಅತಿಥಿಗಳಾಗಿದ್ದರು. ತಹಶೀಲ್ದಾರ್‌ ಅನಂತ ಶಂಕರ ಸ್ವಾಗತಿಸಿ, ಉಪತಹಶೀಲ್ದಾರ್‌ ಶ್ರೀಧರ್‌ ಕೋಡಿಜಾಲು ಕಾರ್ಯಕ್ರಮ ನಿರೂಪಿಸಿದರು.

Advertisement

ಸೌಮ್ಯವಾದದ ಸಾಧನೆ 
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸೌಮ್ಯವಾದದಿಂದಲೂ ಸಾಧನೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟ ಗಾಂಧಿ ಜಗತ್ತಿಗೇ ಆದರ್ಶ. ಗಾಂಧಿ  ಪ್ರಣೀತ ಸಮಾಜ ನಿರ್ಮಾಣ ಇಂದಿನ ಅಗತ್ಯ. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳ ಬೇಕು. ಸ್ವಚ್ಛತೆಯೂ ಗಾಂ ಧಿ ಜಯಂತಿಗೆ ಸೀಮಿತ ಆಗಬಾರದು. ‘ಶಾಸ್ತ್ರಿ-ಗಾಂಧಿ ’ ಅವರ ಚಿಂತನೆಗಳು, ಆದರ್ಶಗಳು ನಮ್ಮ ಪಾಲಿಗೆ ಅನುಕರಣೀಯ. ನಮ್ಮ ಬದುಕಿನಲ್ಲಿಯೂ ಪರಿವರ್ತನೆ ಅಗತ್ಯ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next