Advertisement

Puttur ಫ್ಯಾನ್ಸಿ ಅಂಗಡಿಗೆ ಬೆಂಕಿ: ಮೂವರು ವಶಕ್ಕೆ

11:31 PM Aug 23, 2024 | Team Udayavani |

ಪುತ್ತೂರು: ಪುತ್ತೂರು ಕೋರ್ಟ್‌ ರಸ್ತೆಯಲ್ಲಿ ಗುರುವಾರ ನಸುಕಿನ ಜಾವ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

Advertisement

ಇಲ್ಯಾಸ್‌ ಮಾಲಕತ್ವದ ಬ್ಲಾಕ್‌ ಡೈಮಂಡ್‌ ಫ್ಯಾನ್ಸಿ ಅಂಗಡಿಗೆ ಬೈಕ್‌ನಲ್ಲಿ ಹೆಲ್ಮೆಟ್‌ ಧರಿಸಿ ಬಂದ ವ್ಯಕ್ತಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವುದು ಅಂಗಡಿಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

ಹಲ್ಲೆಗೆ ಪ್ರತೀಕಾರ? ಮೊಸರುಕುಡಿಕೆ ಉತ್ಸವದ ಸಿದ್ಧತೆಯಲ್ಲಿ ತೊಡಗಿದ್ದ ಕಾರ್ಯಕರ್ತರ ಮೇಲೆ ಬುರ್ಖಾಧಾರಿ ಮಹಿಳೆ ಆ.22ರಂದು ರಾತ್ರಿ ಹಲ್ಲೆ ನಡೆಸಿರುವ ಬೆನ್ನಲ್ಲೇ ಮುಂಜಾನೆ ಫ್ಯಾನ್ಸಿಗೆ ಬೆಂಕಿ ಹಚ್ಚಲಾಗಿದೆ. ಹಾಗಾಗಿ ಈ ಎರಡೂ ಘಟನೆಗಳಿಗೆ ಸಂಬಂಧ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next